ಸುಳ್ಯ:ಸುಳ್ಯ ತಾಲೂಕು ಆಂಬುಲೆನ್ಸ್ ಚಾಲಕ ಮಾಲಕ ಸಂಘದ ವತಿಯಿಂದ ಆರೋಗ್ಯ, ಕುಟುಂಬ ಕಲ್ಯಾಣ ಹಾಗು ದ.ಕ.ಜಿಲ್ಲಾ ಉಸ್ತುವಾರಿ ಸಚಿವರಾದ ಯು.ಟಿ.ಖಾದರ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.ರಾಜ್ಯದ
ಖಾಸಗಿ ಆಂಬುಲನ್ಸ್ ಚಾಲಕ ಮಾಲಕರಿಗೆ ಸರಕಾರದ ವತಿಯಿಂದ ವಿಶೇಷ ಸವಲತ್ತು ನೀಡಬೇಕು ಎಂದು ಸಂಘದ ವತಿಯಿಂದ ಸಚಿವರಿಗೆ ಮನವಿ ಸಲ್ಲಿಸಲಾಯಿತು.
ಸಂಘದ ಗೌರವಾಧ್ಯಕ್ಷ ಶಿವಪ್ರಸಾದ್,ಪ್ರಧಾನ ಕಾರ್ಯದರ್ಶಿ ಸಿದ್ದಿಕ್ ಗೂನಡ್ಕ,ಕೋಶಾಧಿಕಾರಿ ರಫೀಕ್ ಬಿಎಂಎ, ತಾಜುದ್ದೀನ್ ಟರ್ಲಿ, ರಫೀಕ್ ಲೈಫ್ ಕೇರ್, ಹಮೀದ್ ಬೆಳ್ಳಾರೆ,ಮಿಥುನ್,ಹನೀಫ್ ಕೆವಿಜಿ, ಸಂದೇಶ್,ಸಿದ್ದೀಕ್ ಜಟ್ಟಿಪಳ್ಳ,ಸಮೀರ್ ಕಾಣಿಯೂರು,ಪೃಥ್ವಿರಾಜ್ ಬೆಳ್ಳಾರೆ ಉಪಸ್ಥಿತರಿದ್ದರು.







