ಮಂಡೆಕೋಲು: ಮಂಡೆಕೋಲು ಗ್ರಾಮದ ಯುವ ಕಾಂಗ್ರೆಸ್ ಸಮಿತಿಯ ಸಭೆ ಕಣೆಮರಡ್ಕದಲ್ಲಿ ನಡೆಯಿತು.ಗ್ರಾಮ ಯುವ ಕಾಂಗ್ರೆಸ್ ಸಮಿತಿ ಅಧ್ಯಕ್ಷ ರಫೀಕ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ
ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಭವಾನಿಶಂಕರ್ ಕಲ್ಮಡ್ಕ,ಸುಳ್ಯ ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ಚೇತನ್ ಕಜೆಗದ್ದೆ, ಸುಳ್ಯ ವಿಧಾನಸಭಾ ಕ್ಷೇತ್ರ ಯುವ ಕಾಂಗ್ರೆಸ್ ಉಪಾಧ್ಯಕ್ಷ ರಂಜಿತ್ ರೈ ಮೇನಾಲ ಮಾತನಾಡಿದರು.
ಈ ಸಂದರ್ಭದಲ್ಲಿ ಮಂಡೆಕೋಲು ಗ್ರಾಮದ ಯುವ ಕಾಂಗ್ರೆಸ್ ಸಮಿತಿಯನ್ನು ಪುನರಚನೆ ಮಾಡಿ ನೂತನ ಅಧ್ಯಕ್ಷರಾಗಿ ಪ್ರಮೋದ್ ಕಣೆಮರಡ್ಕ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ಪ್ರೀತಂ ಮೀನಗದ್ದೆ ಮತ್ತು ಉಪಾಧ್ಯಕ್ಷರುಗಳಾಗಿ ಜಂಶೀರ್ ಸಾಲೆಕ್ಕಾರ್, ಸದಾನಂದ ಮೈತಡ್ಕ, ಯತೀಶ್ ಬೊಳುಗಲ್ಲು ಹಾಗೂ ಕಾರ್ಯದರ್ಶಿಗಳಾಗಿ ಮಿದ್ಲಾಜ್ ಮಾರ್ಗ, ರವಿ ಚೇರದಮೂಲೆ, ಮಿಥುನ್ ಮಡಿವಾಳಮೂಲೆ ಅವರನ್ನು ನೇಮಕಗೊಳಿಸಲಾಯಿತು.
ಎಸ್ಐಆರ್ ಪ್ರಕ್ರಿಯೆ ಬಗ್ಗೆ ಮಾಹಿತಿ ನೀಡಲಾಯಿತು.ಸಭೆಯಲ್ಲಿ ಸುಳ್ಯ ಬ್ಲಾಕ್ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರಕ್ಷಿತ್ ದೊಡ್ಡಡ್ಕ, ವಿನೀತ್ ಮೇದಿನಡ್ಕ, ವಿಕಾಸ್ ಮೀನಗದ್ದೆ, ಮಿಥುನ್, ಕೃಷ್ಣ ಮಣಿಯಾಣಿ, ಶ್ರೀಧರ,ರವಿ, ಸುಜೀತ್, ನೀಲಯ್ಯ ಗೌಡ, ಯತೀಶ್, ಪುಷ್ಪರಾಜ, ಸಿರಾಜುದ್ದೀನ್, ಮುಬಾರಿಸ್, ಅಫ್ಜಲ್, ನಾಸಿರ್, ಸಂದೇಶ್ ಮೈತಡ್ಕ, ವಿಶ್ವನಾಥ, ಧನುಷ್, ಬಾಬು, ಸದಾನಂದ, ಜಾನಕಿ ಕಣೆಮರಡ್ಕ, ಜನಾರ್ಧನ ಮತ್ತಿತರರು ಉಪಸ್ಥಿತರಿದ್ದರು. ಬ್ಲಾಕ್ ಕಾಂಗ್ರೆಸ್ ಕಾರ್ಯಕಾರಿ ಸದಸ್ಯ ಶೇಖರ್ ಕಣೆಮರಡ್ಕ ಸ್ವಾಗತಿಸಿ, ಮಾಜಿ ಗ್ರಾಮ ಪಂಚಾಯತ್ ಸದಸ್ಯ ಶುಭಕರ ಬೊಳುಗಲ್ಲು ವಂದಿಸಿದರು.






