ಸುಳ್ಯ:ಸುಳ್ಯ ಬ್ಲಾಕ್ ಕಾಂಗ್ರೆಸ್ ವತಿಯಿಂದ ತಾಲೂಕಿನ ಪ್ರತಿ ತಾಲೂಕು ಪಂಚಾಯತ್ ವ್ಯಾಪ್ತಿಯಲ್ಲಿ ನಡೆದ ಎಸ್ಐಆರ್ ಮತದಾರ ವಿಶೇಷ ಸಮಗ್ರ ಪರಿಷ್ಕರಣೆಯ ಬಗ್ಗೆ ಜಾಗೃತಿ ಮತ್ತು ಮಾಹಿತಿ ಕಾರ್ಯಕ್ರಮದ ಸಮಾರೋಪಗೊಂಡಿತು. ಸುಳ್ಯ ನಗರ, ಉಬರಡ್ಕ ಮಿತ್ತೂರು ಮತ್ತು ಆಲೆಟ್ಟಿ ಗ್ರಾಮಗಳ ಬಿ.ಎಲ್.ಎ-2 ಹಾಗೂ
ಪಕ್ಷದ ಮುಖಂಡರುಗಳು, ಕಾರ್ಯಕರ್ತರಿಗೆ ಎಸ್.ಐ.ಆರ್ ಕುರಿತು ಮಾಹಿತಿ ಹಾಗೂ ತರಬೇತಿ ಕಾರ್ಯಾಗಾರ ಯುವಜನ ಸಂಯುಕ್ತ ಮಂಡಳಿ ಸಭಾಂಗಣದಲ್ಲಿ ನಡೆಯಿತು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಾಧಾಕೃಷ್ಣ ಬೊಳ್ಳೂರು ಅಧ್ಯಕ್ಷತೆ ವಹಿಸಿದ್ದರು. ಸುಳ್ಯ ವಿಧಾನಸಭಾ ಕ್ಷೇತ್ರದ ಪ್ರಚಾರ ಸಮಿತಿ ಅಧ್ಯಕ್ಷ ದಿನೇಶ್ ಅಂಬೆಕಲ್ಲು, ಸೂಡ ಅಧ್ಯಕ್ಷ ಕೆ ಎಂ ಮುಸ್ತಫಾ,ಕೆಪಿಸಿಸಿ ಮಾಜಿ ಸಂಯೋಜಕ ಸಂಶುದ್ದೀನ್ ಎಸ್, ಬ್ಲಾಕ್ ಪ್ರಧಾನ ಕಾರ್ಯದರ್ಶಿ ಭವಾನಿಶಂಕರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ತರಬೇತುದಾರರಾದ ಶಶಿಧರ ಎಂ ಜೆ ಹಾಗೂ ಚೇತನ್ ಕಜೆಗದ್ದೆ, ಎಸ್.ಐ.ಆರ್ ಕುರಿತು ಮಾಹಿತಿ ನೀಡಿದರು. ತರಬೇತುದಾರರಾದ ಶಶಿಧರ್ ಎಂ ಜೆ ಹಾಗೂ ಚೇತನ್ ಕಜೆಗದ್ದೆ ಅವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.
ಸುಳ್ಯ ನಗರದ ಬಿ ಎಲ್ ಎ -2 ಗಳಾದ ವಿಜಯಕುಮಾರ್ ಕಂದಡ್ಕ, ಕೆ ಟಿ ಭಾಗೀಶ್, ಕೆ ಎಂ ಮುಸ್ತಫಾ, ಶಾಫಿ ಕುತ್ತಮೊಟ್ಟೆ, ಶರೀಫ್ ಕಂಠಿ, ಉಮೇಶ್ ಜಟ್ಟಿಪಳ್ಳ, ನವೀನ್ ಮಚಾದೋ, ಅಬ್ದುಲ್ ಅಜೀಜ್ ಹಳೇಗೇಟು, ಪ್ರಿಥ್ವಿರಾಜ್ ಶಾಂತಿನಗರ, ಗೋಪಾಲಕೃಷ್ಣ ಭಟ್, ಡೇವಿಡ್ ಧೀರಾ ಕ್ರಾಸ್ತಾ, ಎಸ್ ಎಂ ಉಮ್ಮರ್ ಕುರುಂಜಿಗುಡ್ಡೆ, ಶಹೀದ್ ಪಾರೆ, ಅಶ್ರಫ್ ಕಲ್ಲುಮುಟ್ಲು, ಆಲೆಟ್ಟಿ ಗ್ರಾಮದ ಬಿ ಎಲ್ ಎ -2 ಗಳಾದ ಸೀತಾರಾಮ ಕಣಕ್ಕೂರು, ಧರ್ಮಪಾಲ ಕೊಯಿಂಗಾಜೆ, ಗೋಪಾಲ ಗುಂಡ್ಯ, ತವೀದ್ ಕಲ್ಚರ್ಪೆ, ಬಿ ಕೆ ಸತ್ಯಕುಮಾರ್ ಆಡಿಂಜಾ ಭಾಗವಹಿಸಿದ್ದರು.
ಕರ್ನಾಟಕ ರಾಜ್ಯ ಕನಿಷ್ಠ ವೇತನ ಸಲಹಾ ಮಂಡಳಿ ಅಧ್ಯಕ್ಷ ಟಿ ಎಂ ಶಹೀದ್ ತೆಕ್ಕಿಲ್, ಗ್ಯಾರಂಟಿ ಅನುಷ್ಠಾನ ಸಮಿತಿ ಸದಸ್ಯ ಇಬ್ರಾಹಿಂ ಶಿಲ್ಪಾ, ನಗರ ಪಂಚಾಯತ್ ನಾಮ ನಿರ್ದೇಶಿತ ಸದಸ್ಯರಾದ ಭಾಸ್ಕರ ಪೂಜಾರಿ ಬಾಜಿನಡ್ಕ, ರಾಜು ಪಂಡಿತ್, ಸಿದ್ದಿಕ್ ಕೊಕ್ಕೊ, ಮೆಸ್ಕಾಂ ಸಲಹಾ ಸಮಿತಿ ಸದಸ್ಯರಾದ ನಂದರಾಜ್ ಸಂಕೇಶ್, ರಾಬಿಯ, ಲತೀಶ್ ಕುಮಾರ್, ಎಸ್ ಸಿ ಘಟಕ ಅಧ್ಯಕ್ಷ ಮಹೇಶ್ ಬೆಳ್ಳಾರ್ಕರ್, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಗೀತಾ ಕೋಲ್ಚಾರ್, ಎನ್ ಎಸ್ ಯು ಐ ಅಧ್ಯಕ್ಷ ಧನುಷ್ ಕುಕ್ಕೇಟಿ, ಪ್ರಮುಖರಾದ ಮೂಸೆ ಕುಂಞಿ ಕೊಳಂಜಿಕೋಡಿ, ಸುಂದರ ಕುದ್ಪಾಜೆ, ಬ್ಲಾಕ್ ಕಾಂಗ್ರೆಸ್ ಕಾರ್ಯದರ್ಶಿ ರಾಹುಲ್ ಅಡ್ಪಂಗಾಯ, ರಾದೇಶ್ ಕೆಮ್ಮಿಂಜೆ, ಪಿ ಎ ಮಹಮ್ಮದ್, ಕೆ ಬಿ ಇಬ್ರಾಹಿಂ, ಬ್ಲಾಕ್ ಪ್ರಧಾನ ಕಾರ್ಯದರ್ಶಿ ಎಸ್ ಕೆ ಹನೀಫ್, ಕಾರ್ಯದರ್ಶಿ ಇಕ್ಪಾಲ್ ಸುಣ್ಣಮೂಲೆ, ವಿಜೇಶ್ ಹಿರಿಯಡ್ಕ, ಶರವಣ ಮೇದಿನಡ್ಕ, ಮಧುಸೂಧನ್ ಬೂಡು, ಎಸ್ ಸುರೇಶ್ ಕುತ್ತಮೊಟ್ಟೆ, ಮಂಜುನಾಥ ಮಡ್ತಿಲ, ಜೂಲಿಯ ಕ್ರಾಸ್ತಾ, ಪ್ರಧಾನ ಕಾರ್ಯದರ್ಶಿ ರವಿಕುಮಾರ್ ಕಿರಿಭಾಗ, ಮತ್ತಿತರರು ಭಾಗವಹಿಸಿದ್ದರು. ಜತ್ತಪ್ಪ ರೈ ಸ್ವಾಗತಿಸಿ, ಭವಾನಿಶಂಕರ್ ಕಲ್ಮಡ್ಕ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.







