ಸುಳ್ಯ: ಮೈಸೂರಿನ ಮಾಜಿ ಸಂಸದ ಪ್ರತಾಪ ಸಿಂಹ ಬುಧವಾರ ಸುಳ್ಯಕ್ಕೆ ಆಗಮಿಸಿದ್ದಾರೆ. ಸುಳ್ಯದಲ್ಲಿ ನಡೆಯುತ್ತಿರುವ ಮೊಸರು ಕುಡಿಕೆ ಉತ್ಸವದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಧಾರ್ಮಿಕ ಉಪನ್ಯಾಸ ನೀಡಲು ಅವರು
ಸುಳ್ಯಕ್ಕೆ ಆಗಮಿಸಿದ್ದಾರೆ. ಬಿಜೆಪಿ ಮುಖಂಡರು, ವಿಶ್ವ ಹಿಂದೂ ಪರಿಷದ್ ಮುಖಂಡರು ಸೇರಿ ಪ್ರತಾಪ ಸಿಂಹ ಅರವನ್ನು ಸ್ವಾಗತಿಸಿದರು. ಪ್ರಮುಖರ ಜೊತೆ ಪ್ರತಾಪಸಿಂಹ ಅವರು ಮಾತುಕತೆ ನಡೆಸಿದರು.
ಶಾಸಕಿ ಭಾಗೀರಥಿ ಮುರುಳ್ಯ, ಎಸ್.ಎನ್.ಮನ್ಮಥ, ಎ.ವಿ.ತೀರ್ಥರಾಮ, ಹರೀಶ್ ಕಂಜಿಪಿಲಿ, ಎನ್.ಎ.ರಾಮಚಂದ್ರ, ಸೋಮಶೇಖರ ಪೈಕ ಮತ್ತಿತರರು ಇದ್ದರು