ಸುಳ್ಯ:ವಿಶ್ವ ಹಿಂದೂ ಪರಿಷತ್, ಬಜರಂಗದಳ, ಮಾತೃಶಕ್ತಿ ದುರ್ಗಾವಾಹಿನಿ ಸುಳ್ಯ ಪ್ರಖಂಡ ಮತ್ತು ಮೊಸರು ಕುಡಿಕೆ ಉತ್ಸವ ಸಮಿತಿ ಸುಳ್ಯ ಇದರ ಆಶ್ರಯದಲ್ಲಿ ವಿಶ್ವ ಹಿಂದೂ ಪರಿಷತ್ನ ಸ್ಥಾಪನಾ ದಿನಾಚರಣೆಯ ಅಂಗವಾಗಿ ‘ಸುಳ್ಯ ಮೊಸರು ಕುಡಿಕೆ ಉತ್ಸವ’ ಮತ್ತು ವೈಭವದ ಶೋಭಾಯಾತ್ರೆ ಸುಳ್ಯ ನಗರದಲ್ಲಿ ಸಂಭ್ರಮದ ಅಲೆಯೆಬ್ಬಿಸಿತು.
ವೀರ ಯುವಕರಿಂದ ಸಾಹಸಮಯ
ಅಟ್ಟಿ ಮಡಕೆ ಒಡೆಯುವ ಗೋಪುರ ಮೊಸರುಕುಡಿಕೆ ಮತ್ತು ಶೋಭಾಯಾತ್ರೆ ಶ್ರೀ ಚೆನ್ನಕೇಶವ ದೇವಸ್ಥಾನದ ಮುಂಭಾಗದಿಂದ ಆರಂಭಗೊಂಡಿತು. ಬಳಿಕ ಸುಳ್ಯ ನಗರದ ವಿವಿಧ ಕಡೆಗಳಲ್ಲಿ ಅಳವಡಿಸಲಾದ ಅಟ್ಟಿ ಮಡಕೆಗಳನ್ನು ಒಡೆಯಲಾಯಿತು.ಚೆಂಡೆ, ವಾದ್ಯ, ವಯಲಿನ್ ವಾದನ, ಸಿಂಗಾರಿಮೇಳ,ಆಕರ್ಷಕ ಗೊಂಬೆ ಕುಣಿತ, ಕುಣಿತ ಭಜನಾ ತಂಡಗಳು ಮೆರವಣಿಗೆಗೆ ಮೆರುಗು ನೀಡಿತು.ಚೆನ್ನಕೇಶವ ದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಸರರಾದ
ಡಾ.ಹರಪ್ರಸಾದ್ ತುದಿಯಡ್ಕ ತೆಂಗಿನ ಕಾಯಿ ಒಡೆದು,ಮರ್ಕಂಜ ಶ್ರೀ ಅನ್ನ ಪೂರ್ಣೇಶ್ವರಿ ಕ್ಷೇತ್ರದ

ಧರ್ಮದರ್ಶಿಗಳಾದ ಔಘಡ್ ಪೀರ್ ಯೋಗಿ ರಾಜೇಶ್ನಾಥ್ ಜೀ ಮೊಸರು ಕುಡಿಕೆ ಒಡೆಯುವ ಮೂಲಕ ಮತ್ತು ಹಿಂದೂ ಪರಿಷತ್ ಸುಳ್ಯ ಪ್ರಖಂಡದ ಅಧ್ಯಕ್ಷ ಶ್ರೀಕಾಂತ್ ಗೋಳ್ವಾಲ್ಕರ್ ಕೇಸರಿ ಧ್ವಜ ಬೀಸುವ ಮೂಲಕ ಶೋಭಾಯಾತ್ರೆಗೆ ಚಾಲನೆ ನೀಡಿದರು.ಮೊಸರು ಕುಡಿಕೆ ಉತ್ಸವ ಸಮಿತಿ ಅಧ್ಯಕ್ಷ ಸತೀಶ್ ಕೆ.ಜಿ, ಕಾರ್ಯದರ್ಶಿ ವರ್ಷಿತ್ ಚೊಕ್ಕಾಡಿ, ಕೋಶಾಧಿಕಾರಿ ನವೀನ್ ಎಲಿಮಲೆ, ಗೌರವ ಸಲಹೆಗಾರರಾದ ತೀರ್ಥಕುಮಾರ್ ಕುಂಚಡ್ಕ, ಪ್ರಚಾರ ಪ್ರಸಾರ ಪ್ರಮುಖ್ ದೇವಿಪ್ರಸಾದ್ ಅತ್ಯಾಡಿ,ಬಜರಂಗ ದಳ ಸಂಯೋಜಕ ಹರಿಪ್ರಸಾದ್ ಎಲಿಮಲೆ, ಪ್ರಮುಖರಾದ

ಪ್ರಶಾಂತ್ ಕಾಯರ್ತೋಡಿ, ಉಪೇಂದ್ರ ನಾಯಕ್, ರಾಜೇಶ್ ಕಲ್ಲುಮುಟ್ಲು, ರೂಪೇಶ್ ಪೂಜಾರಿಮನೆ, ತೀರ್ಥೇಶ್,ಪ್ರಕಾಶ್ ಯಾದವ್, ಪ್ರಬೋದ್ ಮೇನಾಲ, ಶ್ರೀಕಾಂತ್ ಮಾವಿನಕಟ್ಟೆ, ಗಿರೀಶ್ ಕಲ್ಲುಗದ್ದೆ, ರವಿಚಂದ್ರ ಕೊಡಿಯಾಲಬೈಲು,ರಜತ್ ಅಡ್ಕಾರ್,ಶ್ರೀನಾಥ್ ಆಲೆಟ್ಟಿ, ಶೀನಪ್ಪ ಬಯಂಬು, ಗಿರೀಶ್ ಕುಂಠಿನಿ ಮತ್ತಿತರರು ಉಪಸ್ಥಿತರಿದ್ದರು.
ಬೆಳಿಗ್ಗೆ ದೇವಸ್ಥಾನದ ಮುಂಭಾಗದಲ್ಲಿ ವಿಶ್ವ ಹಿಂದೂ ಪರಿಷತ್ ಸುಳ್ಯ ಪ್ರಖಂಡದ ಪ್ರಾಯೋಜಕತ್ವದಲ್ಲಿ ‘ಎಣ್ಣೆ ಕಂಬ’ಏರುವ ಸ್ಪರ್ಧೆ, ಮಹಿಳೆಯರಿಗಾಗಿ ಕಣ್ಣಿಗೆ ಬಟ್ಟೆ ಕಟ್ಟಿ ಮಡಕೆ ಒಡೆಯುವ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು.










