ಗೂನಡ್ಕ:ಪಹಲ್ಗಾಮ್ ಭಯೋತ್ಪಾದಕ ದಾಳಿ ಅಮಾನವೀಯ, ಇಸ್ಲಾಂ ಇಂತಹ ಘಟನೆಗಳನ್ನು ನಿರ್ದಾಕ್ಷಿಣ್ಯವಾಗಿ ಖಂಡಿಸುತ್ತದೆ ಎಂದುವಗೂನಡ್ಕ ಬದ್ರಿಯಾ ಜುಮಾ ಮಸೀದಿ ಖತೀಬ್ ಅಬೂಬಕ್ಕರ್ ಸಿದ್ದೀಕ್ ಸಖಾಫಿ ಅಲ್ ಅರ್ಷದಿ ಹೇಳಿದ್ದಾರೆ.ಪ್ರವಾಸಕ್ಕೆಂದು ತೆರಳಿದ್ದ ನಾಗರಿಕರನ್ನು ಹಾಗೂ
ಅವರನ್ನು ರಕ್ಷಿಸಲು ಪ್ರಯತ್ನಿಸಿದ ಸ್ಥಳೀಯರನ್ನು ಭಯೋತ್ಪಾದಕರು ಕಾಶ್ಮೀರದ ಪಹಲ್ಗಾಮ್ ನಲ್ಲಿ ಅಮಾನವೀಯವಾಗಿ ಹತ್ಯೆಗೈದದ್ದು ತೀವ್ರ ದುಃಖಕರ ವಿಚಾರವಾಗಿದ್ದು, ಭಯೋತ್ಪಾದಕರಿಗೆ ಧರ್ಮವಿಲ್ಲ, ಧರ್ಮವನ್ನು ಅರಿತವರು ಇಂತಹ ಕೃತ್ಯಗಳನ್ನು ಮಾಡಲು ಎಂದಿಗೂ ಸಾಧ್ಯವಿಲ್ಲ ಎಂದು ಅವರು ಜುಮಾ ನಮಾಜ್ ಬಳಿಕದ ತಮ್ಮ ಭಾಷಣದಲ್ಲಿ ಹೇಳಿದರು.
ಇಸ್ಲಾಂ ಧರ್ಮವು ಶಾಂತಿ, ಸೌಹಾರ್ದತೆಗೆ ಪ್ರಾಮುಖ್ಯವನ್ನು ನೀಡುತ್ತದೆ, ಭಯೋತ್ಪಾದನಾ ಕೃತ್ಯಗಳನ್ನು ಇಸ್ಲಾಂ ನಿರ್ದಾಕ್ಷಿಣ್ಯವಾಗಿ ಖಂಡಿಸುತ್ತದೆ, ನಮ್ಮ ಭಾರತ ದೇಶದ ಸರ್ವರೂ ಐಕ್ಯತೆಯಿಂದ ಈ ಘಟನೆಯ ವಿರುದ್ದ ನಿಲ್ಲಬೇಕೆಂದು ಅವರು ಹೇಳಿದರು.