ಸುಳ್ಯ: ಪೆಟ್ರೋಲ್, ಡೀಸೆಲ್ ದರ ಏರಿಕೆ ಮಾಡಿ ಕಾಂಗ್ರೆಸ್ ಸರಕಾರ ತನ್ನ ಜನ ವಿರೋಧಿ ನಿಲುವನ್ನು ಮತ್ತೊಮ್ಮೆ ಸಾಬೀತುಪಡಿಸಿದೆ ಎಂದು ಶಾಸಕಿ ಭಾಗೀರಥಿ ಮುರುಳ್ಯ ಹೇಳಿದ್ದಾರೆ. ಉಚಿತ ಉಚಿತ ಎಂದ ಸರಕಾರದ ಈ ನಿಲುವಿನಿಂದ ಈಗ
ಬೆಲೆ ಏರಿಕೆ ಖಚಿತ ಎಂಬಂತಾಗಿದೆ. ಬಡವರ ಸರಕಾರ ಎಂದು ಅಧಿಕಾರಕ್ಕೆ ಬಂದು ಈಗ ಏಕಾಏಕಿ ಪೆಟ್ರೋಲ್, ಡಿಸೇಲ್ ಬೆಲೆಯನ್ನು ಹೆಚ್ಚಿಸಿ ಜನಸಾಮಾನ್ಯರ ಬದುಕಿಗೆ ಬರೆ ಎಳೆದಿದೆ. ಮೊದಲು ಠಸೆ ಪೇಪರ್ ಬೆಲೆಯನ್ನು ಹೆಚ್ಚಿಸಿತ್ತು ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಸೋಲಿನ ಹತಾಶೆಯಿಂದ ಕಾಂಗ್ರೆಸ್ ರಾಜ್ಯದಲ್ಲಿ ಪೆಟ್ರೋಲ್ ದರದಲ್ಲಿ ನೂರ ದಾಟಿಸಿ ಜನತಗೆ ಶಾಕ್ ನೀಡಿದೆ. ಪೆಟ್ರೋಲ್, ಡೀಸಲ್ ದರ ಏರಿಕೆ ಹಿಂಪಡೆಯದಿದ್ದರೆ ಮುಂದಿನ ದಿನಗಳಲ್ಲಿ ಈ ಸರಕಾರದ ವಿರುದ್ಧ ಜನಬೀದಿಗೆ ಇಳಿದು ಹೋರಾಟವನ್ನು ಮಾಡಲಿದ್ದಾರೆ. ಸರಕಾರ ಏರಿಸಿದ ಬೆಲೆಯನ್ನು ಕೂಡಲೇ ಹಿಂಪಡೆಯಬೇಕು ಎಂದು ಅವರು ಅಗ್ರಹಿಸಿದ್ದಾರೆ.