ಕುಂಬಳೆ:ಸರೋವರ ಕ್ಷೇತ್ರ ಶ್ರೀ ಅನಂತಪುರದಲ್ಲಿ ತಿಂಗಳುಗಳ ಹಿಂದೆ ಪ್ರತ್ಯಕ್ಷಗೊಂಡ ನೂತನ ಮೊಸಳೆ ಮರಿ ಇದೇ ಮೊದಲ ಬಾರಿಗೆ ಕ್ಷೇತ್ರ ಪ್ರಾಂಗಣ ಏರಿದೆ! ಗರ್ಭಗುಡಿ ಹತ್ತಿರವೇ ವಿಶ್ರಾಂತಿ ಪಡೆದಿದೆ. ಈ ಹೊತ್ತಿಗೆ ಕ್ಷೇತ್ರ ನಡೆ ಮುಚ್ಚಿತ್ತು. ಸಂಜೆ ಕ್ಷೇತ್ರ ನಡೆ ತೆರೆದ
ಅರ್ಚಕರಿಗೆ ಈ ಭವ್ಯ ದೃಶ್ಯ ಗೋಚರವಾಗಿದ್ದು ಅವರಿದನ್ನು ಮೊಬೈಲಿನಲ್ಲಿ ಸೆರೆ ಹಿಡಿದು ಹಂಚಿದ್ದಾರೆ…!
ಸುಮಾರು 80 ವರ್ಷಗಳಿಂದ ಕ್ಷೇತ್ರದ ಕೊಳದಲ್ಲಿ ನೆಲೆಸಿದ್ದ ಮೊಸಳೆಯು 2022ರ ಅಕ್ಟೋಬರ್ 9ರಂದು ರಾತ್ರಿ ಈ ಹಿಂದೆ ಇದ್ದ ಮೊಸಳೆ (ಬಬಿಯಾ) ಮೃತಪಟ್ಟಿತ್ತು. ಅದರ ಸಾವಿನ ಬಳಿಕ ಸರಿಯಾಗಿ ಒಂದು ವರ್ಷ ಕಳೆದ ನಂತರ ಇನ್ನೊಂದು ಮೊಸಳೆ ಮರಿ ಕೊಳದಲ್ಲಿ ಕಾಣಿಸಿಕೊಂಡಿತ್ತು.ಜೂ. 14ರಂದು ಗರ್ಭಗುಡಿಯ ಎದುರಿನ ಹಾಸು ಕಲ್ಲಿನ ಮೇಲೆ ವಿಶ್ರಾಂತಿ ಪಡೆಯುತ್ತಿತ್ತು.ಇದು ದೇವರ ಮೊಸಳೆ ಎಂದೇ ಖ್ಯಾತವಾಗಿದ್ದು, ಒಂದು ಮೊಸಳೆ ಇಲ್ಲವಾದಾಗ ಮತ್ತೊಂದು ಬರುತ್ತದೆ ಎಂಬುದು ಭಕ್ತರ ನಂಬಿಕೆ.