ಸುಳ್ಯ:ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಸುಳ್ಯಕ್ಕೆ ಆಗಮಿಸಿದ ಕೇರಳದ ಕಲ್ಲಿಕೋಟೆಯಲ್ಲಿರುವ ವಿಶ್ವ ಪ್ರಸಿದ್ದಿ ಹೊಂದಿದ ಶೈಕ್ಷಣಿಕ, ಸಾoಸ್ಕೃತಿಕ, ಧಾರ್ಮಿಕ ಕೇಂದ್ರ ಕುತ್ಯಾಡಿ ಸಿರಾಜುಲ್ ಹುದಾ ಸಂಸ್ಥಾಪಕ ಶೈಖುನಾ ಪೇರೋಡ್ ಅಬ್ದುರ್ರಹ್ಮಾನ್ ಸಖಾಫಿಯವರು
ಸುಳ್ಯಕ್ಕೆ ಭೇಟಿ ನೀಡಿದರು.ಗಾಂಧಿನಗರ ಕೇಂದ್ರ ಜುಮ್ಮಾ ಮಸ್ಜಿದ್ ಅಧ್ಯಕ್ಷ ಹಾಜಿ ಕೆ. ಎಂ. ಮುಸ್ತಫ,ಮಾಜಿ ಅಧ್ಯಕ್ಷ ಆದಂಹಾಜಿ ಕಮ್ಮಾಡಿ, ಅನ್ಸಾರಿಯಾ ಪ್ರದಾನ ಕಾರ್ಯದರ್ಶಿ ಲತೀಫ್ ಹರ್ಲಡ್ಕ ಸ್ವಾಗತಿಸಿ ಸನ್ಮಾನಿಸಿದರು. ಈ ಸಂದರ್ಭದಲ್ಲಿ ಉಸ್ತಾದ್ ಅವರು ಸಂದೇಶ ನೀಡಿದರು
ಈ ಸಂದರ್ಭದಲ್ಲಿ ಅನ್ಸಾರಿಯ ಖತೀಬರಾದ ಉಮ್ಮರ್ ಮುಸ್ಲಿಯಾರ್ ಮರ್ದಾಳ, ಇಬ್ರಾಹಿಂ ಸಖಾಫಿ ಪುಂಡೂರ್ ಮೊದಲಾವರು ಉಪಸ್ಥಿತರಿದ್ದರು.