ಬಳ್ಪ:ಬಳ್ಪ ಬುಡೆಂಗಿ ಶ್ರೀ ವಿಷ್ಣುಮೂರ್ತಿ ದೈವಸ್ಥಾನದಲ್ಲಿ ಶ್ರೀ ವಿಷ್ಣುಮೂರ್ತಿ ದೈವದ ಒತ್ತೆಕೋಲ ಏ.27 ಮತ್ತು 28 ರಂದು ನಡೆಯಲಿದೆ. ಏ.26 ಭಾನುವಾರ ದೈವಸ್ಥಾನದಲ್ಲಿ ಮತ್ತು ಬೋಗಾಯನಕರೆ ವಿಷ್ಣುನಗರ ವಠಾರದಲ್ಲಿ ಸ್ಥಳ ಶುದ್ದಿ ಮತ್ತು ಗಣಪತಿ ಹವನ ನಡೆಯಲಿದೆ. ಏ.27 ಸೋಮವಾರ ಸಂಜೆ 6ಕ್ಕೆ
ಶ್ರೀ ವಿಷ್ಣುಮೂರ್ತಿ ಭಂಡಾರ ತೆಗೆಯುವುದು,7ಕ್ಕೆ ಮೇಲೇರಿಗೆ ಅಗ್ನಿ ಸ್ಪರ್ಶ,ರಾತ್ರಿ 8ಕ್ಕೆ ಸಾರ್ವಜನಿಕ ಅನ್ನಸಂತರ್ಪಣೆ, ರಾತ್ರಿ 10ಕ್ಕೆ ಶ್ರೀ ವಿಷ್ಣುಮೂರ್ತಿ ದೈವದ ಕುಳ್ಚಾಟ ನಡೆಯಲಿದೆ. ಏ.28 ಮಂಗಳವಾರ ಪ್ರಾತಃ ಕಾಲ 5ಕ್ಕೆ ಶ್ರೀ ವಿಷ್ಣುಮೂರ್ತಿ ದೈವದ ಅಗ್ನಿ ಪ್ರವೇಶ, ಬೆಳಿಗ್ಗೆ 6ಕ್ಕೆ ಮಾರಿಕಳ, ಬೆಳಿಗ್ಗೆ 7ಕ್ಕೆ ಪ್ರಸಾದ ವಿತರಣೆ, ಬೆಳಿಗ್ಗೆ 9ಕ್ಕೆ ಮುಳ್ಳುಗುಳಿಗ ದೈವದ ನೇಮ, ಪ್ರಸಾದ ವಿತರಣೆ ನಡೆಯಲಿದೆ ಎಂದು ದೈವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ಡಾ.ದೇವಿಪ್ರಸಾದ್ ಕಾನತ್ತೂರ್ ತಿಳಿಸಿದ್ದಾರೆ.

ಸಾಂಸ್ಕೃತಿಕ ಕಾರ್ಯಕ್ರಮ : ಏ.27 ಸೋಮವಾರ ರಾತ್ರಿ 8ರಿಂದ ದುರ್ಗಾಂಭ ಮೆಲೋಡಿಸ್ ಸುಬ್ರಹ್ಮಣ್ಯ ಇವರಿಂದ ಸಂಗೀತ ರಸಮಂಜರಿ, ರಾತ್ರಿ 11 ರಿಂದ ಡಾ.ಗೋಪಾಲಕೃಷ್ಣ ಭಟ್ ದೇವಸ್ಯ, ಗುತ್ತಿಗಾರು ಇವರ ಸಂಯೋಜನೆಯಲ್ಲಿ ಜಿಲ್ಲೆಯ ಪ್ರಸಿದ್ಧ ಕಲಾವಿದರ ಕೂಡುವಿಕೆಯಿಂದ ಯಕ್ಷಗಾನ ಬಯಲಾಟ ‘ಭೃಗು ಲಾಂಛನ ಶ್ರೀನಿವಾಸ ಕಲ್ಯಾಣ’ ನಡೆಯಲಿದೆ ಎಂದು ಡಾ.ದೇವಿಪ್ರಸಾದ್ ಕಾನತ್ತೂರ್ ತಿಳಿಸಿದ್ದಾರೆ.












