ಸುಳ್ಯ:ಸುಳ್ಯದ ಪೈಚಾರು ಮಾರಿಯಮ್ಮ ವೀರಭದ್ರ ಸ್ವಾಮಿ ದೇವಸ್ಥಾನದ ಬ್ರಹ್ಮಕಲಶೋತ್ಸವದ ಅಂಗವಾಗಿ ಧಾರ್ಮಿಕ ಸಭೆ ನಡೆಯಿತು.ಶಾಸಕಿ ಭಾಗೀರಥಿ ಮುರುಳ್ಯ ಉದ್ಘಾಟಿಸಿ ಮಾತನಾಡಿದರು. ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಸುಂದರ ರಾವ್ ಅಧ್ಯಕ್ಷತೆ ವಹಿಸಿದ್ದರು. ಸುಳ್ಯ ಕಾಯರ್ತೋಡಿ ದೇವಸ್ಥಾನದ
ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಎಂ.ವೆಂಕಪ್ಪ ಗೌಡ, ಹಿರಿಯ ಸಹಕಾರಿ ಜಾಕೆ ಮಾಧವ ಗೌಡ, ಮಾದಿಗ ದಂಡೋರ ಅಖಿಲ ಭಾರತ ರಾಜ್ಯ ಸಂಸ್ಥಾಪಕಾಧ್ಯಕ್ಷ ಬಿ.ಹುಸೇನಪ್ಪ ಸ್ವಾಮಿ ಮಾದಿಗ, ಬ್ರಹ್ಮಕಲಶೋತ್ಸವ ಸಮಿತಿ ಕಾರ್ಯಾಧ್ಯಕ್ಷ ದೇವಿಪ್ರಸಾದ್ ಇಂಜಿನಿಯರ್,ಪ್ರಧಾನ ಕಾರ್ಯದರ್ಶಿ ಯಶವಂತ್ ಪಟ್ರಕೋಡಿ, ಕೋಶಾಧಿಕಾರಿ ಕೇಶವ ಮಾಸ್ತರ್ ಹೊಸಗದ್ದೆ, ಸಂಚಾಲಕ ರಾಜೇಶ್ ಶೆಟ್ಟಿ ಮೇನಾಲ, ಸಹ ಸಂಚಾಲಕ ನಾರಾಯಣ ಎಸ್.ಎಂ., ಆಡಳಿತ ಸಮಿತಿ ಅಧ್ಯಕ್ಷ ವೇಣುಗೋಪಾಲ, ಹಿರಿಯರಾದ ಕೃಷ್ಣ ಪೆರಾಜೆ, ಆಡಳಿತ ಮೊಕ್ತೇಸ ಸಂಜೀವ, ವಸಂತಿ, ಯಮುನಾ ವೇದಿಕೆಯಲ್ಲಿ ಇದ್ದರು. ಸಮಾರಂಭದಲ್ಲಿ
ನಿವೃತ್ತ ಶಿಕ್ಷಕಿ ಯಶೋದಾ, ನಾರಾಯಣ ಗುರುಸ್ಚಾಮಿ ದೊಡ್ಡೇರಿ, ರಮೇಶ್ ಪೂಜಾರಿ ಜಯನಗರ, ಸೀತಮ್ಮ ಚಾತುಮೇಸ್ತ್ರೀ, ಪ್ರೇಮಾನಂದ, ಐತಪ್ಪ ನಾಯ್ಕ, ಸುಂದರ ರೈ ಯವರನ್ನು ಸನ್ಮಾನಿಸಲಾಯಿತು.
ಪ್ರಣಮ್ಯ ಪ್ರಾರ್ಥಿಸಿದರು. ಸಹ ಸಂಚಾಲಕ ನಾರಾಯಣ ಎಸ್.ಎಂ. ಪ್ರಾಸ್ತಾವಿಕ ಮಾತನಾಡಿ, ಸ್ವಾಗತಿಸಿದರು. ಉದಯಭಾಸ್ಕರ್ ಸುಳ್ಯ ಕಾರ್ಯಕ್ರಮ ನಿರೂಪಿಸಿದರು. ಕಾರ್ಯದರ್ಶಿ ರಾಘವ ಪೆರಾಜೆ ವಂದಿಸಿದರು.
ಸಭಾ ಕಾರ್ಯಕ್ರಮಕ್ಕೆ ಮೊದಲು ಸ್ಥಳೀಯ ಪ್ರತಿಭೆಗಳಿಂದ ಸಾಂಸ್ಕೃತಿಕ ವೈವಿಧ್ಯ ನಡೆಯಿತು. ಬಳಿಕ ಛತ್ರಪತಿ ಶಿವಾಸಿ ನಾಟಕ ಪ್ರದರ್ಶನ ನಡೆಯಿತು.














