ಸುಳ್ಯ:ಪೈಚಾರ್ ಶ್ರೀ ಮಾರಿಯಮ್ಮ ವೀರಭದ್ರ ಸ್ವಾಮಿ ದೇವಸ್ಥಾನದಲ್ಲಿ ನಡೆದ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಸಂಪನ್ನಗೊಂಡಿತು.ಕ್ಷೇತ್ರದಲ್ಲಿ ಶ್ರೀ ಮಂತ್ರವಾದಿ ಗುಳಿಗ ದೈವದ ನೇಮೋತ್ಸವದೊಂದಿಗೆ ಪ್ರತಿಷ್ಠೆ ನಡೆದು ಬ್ರಹ್ಮ ಕಲಶೋತ್ಸವ ಸಂಪನ್ನಗೊಂಡಿತು. ಮಂತ್ರವಾದಿ ಗುಳಿಗ ನೇಮೋತ್ಸವ ನೋಡಲು
ಭಕ್ತರು ಕಿಕ್ಕಿರಿದು ಸೇರಿದ್ದರು.4 ದಿನಗಳ ಕಾಲ ನಡೆದ ಬ್ರಹ್ಮ ಕಲಶೋತ್ಸವದಲ್ಲಿ ಸಾವಿರಾರು ಮಂದಿ ಭಾಗವಹಿಸಿದ್ದರು. ಪೈಚಾರ್, ಕುಕ್ಕಾಜೆಕಾನ, ಬೆಟ್ಟಂಪಾಡಿ, ಶಾಂತಿನಗರ, ಹಳೆಗೇಟ್, ದೊಡ್ಡೇರಿ, ಜಯನಗರ,ಕುಕ್ಕನ್ನೂರು, ಪಿಲಿಕ್ಕೋಡಿ, ಬೊಳುಬೈಲು, ಸೇರಿದಂತೆ ನಾಡಿನ ವಿವಿಧ ಭಾಗಗಳಿಂದ ಕ್ಷೇತ್ರಕ್ಕೆ ಭಕ್ತರು ಕ್ಷೇತ್ರಕ್ಕೆ ಆಗಮಿಸಿ

ಪ್ರಸಾದ ಸ್ವೀಕರಿಸಿದರು.ಮಾಣಿಲ ಶ್ರೀಧಾಮದ ಮೋಹನದಾಸ ಪರಮಹಂಸ ಸ್ವಾಮೀಜಿ ಕ್ಷೇತ್ರಕ್ಕೆ ಆಗಮಿಸಿ ಆಶೀರ್ವಚನ ನೀಡಿದರು.
ಜಗತ್ತಿಗೆ ಬಂದಂತಹ ಸಂಕಷ್ಟವನ್ನು ನಿವಾರಿಸಲು ಮೋಹನದಾಸ ಸ್ವಾಮೀಜಿ ಅವರ ನೇತೃತ್ವದಲ್ಲಿ ‘ಮಾರಿಯಮ್ಮ ಕ್ಷೇತ್ರದಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಲಾಯಿತು.ಈ ಸಂದರ್ಭದಲ್ಲಿ ಬ್ರಹ್ಮ ಕಲಶೋತ್ಸವ ಸಮಿತಿ,ಆಡಳಿತ ಸಮಿತಿ ಪದಾಧಿಕಾರಿಗಳು, ಭಕ್ತರು ಉಪಸ್ಥಿತರಿದ್ದರು.














