ಸುಳ್ಯ:ಅಂಜಲಿ ಮೊಂಟೆಸ್ಸರಿ ಸ್ಕೂಲ್ನಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಆಚರಿಸಲಾಯಿತು. ಅಷ್ಟಮಿ ಪ್ರಯುಕ್ತ ಪುಟಾಣಿಗಳಿಗೆ ಮುದ್ದು ಕೃಷ್ಣ, ಬಾಲಾ ಕೃಷ್ಣ ಹಾಗೂ ಯಶೋಧಾ ಕೃಷ್ಣ ಸ್ಪರ್ಧೆ ಏರ್ಪಡಿಸಲಾಯಿತು. ಕಾರ್ಯಕ್ರಮದ ಉದ್ಘಾಟನೆಯನ್ನು
ಲಯನ್ಸ್ ಕ್ಲಬ್ನ ಮಾಜಿ ಅಧ್ಯಕ್ಷೆ ರೂಪಶ್ರೀ ಜೆ ರೈ ಹಾಗೂ ತೇಜಸ್ವಿನಿ ಕಿರಣ್ ದೀಪ ಬೆಳಗಿಸಿ, ಬಾಲಕೃಷ್ಣನ ತೊಟ್ಟಿಲನ್ನು ತೂಗುವ ಮೂಲಕ ನೆರವೇರಿಸಿದರು. ಶುಭಕರ ಬಿ.ಸಿ ಅಧ್ಯಕ್ಷತೆ ವಹಿಸಿದ್ದರು. ಬಳಿಕ ಪುಟಾಣಿ ಕೃಷ್ಣರ ನೃತ್ಯ ಪೋಷಕರಿಗೆ ಮಡಕೆ ಒಡೆಯುವ ಸ್ಪರ್ಧೆ ಹಾಗೂ ತೆಂಗಿನಕಾಯಿ ಒಡೆಯುವ ಸ್ಪರ್ಧೆ ಯನ್ನು ಏರ್ಪಡಿಸಲಾಗಿತ್ತು. ವೇದಿಕೆಯಲ್ಲಿ ಶಾಲೆಯ ಸಂಚಾಲಕಿ ಗೀತಾಂಜಲಿ ಟಿ. ಜಿ, ಪೋಷಕರ ಪ್ರತಿನಿಧಿಗಳಾದ ಶಿಲ್ಪಾ ಹಾಗೂ ಶುಶಾನ್, ಸಂಸ್ಥೆಯ ಟ್ರಸ್ಟಿ ಚೇತನ್ ಉಪಸ್ಥಿತರಿದ್ದರು. ಶುಶಾನ್ ವಂದಿಸಿದರು. ಶಿಕ್ಷಕಿ ನಿರ್ಮಲ ಕಾರ್ಯಕ್ರಮವನ್ನು ನಿರೂಪಿಸಿದರು.