ಸುಳ್ಯ:ಪೈಚಾರ್ ಶ್ರೀ ಮಾರಿಯಮ್ಮ ವೀರಭದ್ರ ಸ್ವಾಮಿ ದೇವಸ್ಥಾನದಲ್ಲಿ ಪ್ರತಿಷ್ಠಾ ಬ್ರಹ್ಮಕಲಶೋತ್ಸವದ ಅಂಗವಾಗಿ ದೇವಸ್ಥಾನದಲ್ಲಿ ಏ.22ರಂದು ವಿವಿಧ ವೈದಿಕ ಕಾರ್ಯಕ್ರಮಗಳು ನಡೆಯಿತು. ತಂತ್ರಿಗಳಾದ ಬ್ರಹ್ಮಶ್ರೀ ಅಟ್ಟೋಳಿ ಇಲ್ಲತ್ ವಾಸುದೇವ ನಂಬೂದಿರಿ ಕುರುವೇಲಿ ಪಯ್ಯನ್ನೂರು ಇವರ ನೇತೃತ್ವದಲ್ಲಿ ಏ.22ರಂದು
ಪೂರ್ವಾಹ್ನ 6ಕ್ಕೆ ದೀಪಾರಾಧನೆ, ಸಾಮೂಹಿಕ ಪ್ರಾರ್ಥನೆ ನಡೆಸಿ ಶ್ರೀದೇವಿಯ ಮೂಲವಿಗ್ರಹವನ್ನು ದೇವಸ್ಥಾನಕ್ಕೆ ತರಲಾಯಿತು. ಬೆಳಿಗ್ಗೆ 6.30ಕ್ಕೆ ಶ್ರೀ ಮಹಾಗಣಪತಿ ಹೋಮ, ಬಿಂಬಶುದ್ಧಿ, ಬಿಂಬ ಪರಿಗ್ರಹ, ಅನುಜ್ಞಾ ಪ್ರಾರ್ಥನೆ ನಡೆಯಿತು.ರಾತ್ರಿ 7ರಿಂದ ದೇವಿಪೂಜೆ, ಶಯ್ಯಾ ಪೂಜೆ, ಅದಿವಾಸ ಹೋಮ, ಅತ್ತಾಳ ಪೂಜೆ ನಡೆಯಿತು. ಸಂಜೆ ಸ್ಥಳೀಯರಿಂದ ಸಾಂಸ್ಕೃತಿಕ ಕಾರ್ಯಕ್ರಮ ಬಳಿಕ ಸಭಾ ಕಾರ್ಯಕ್ರಮ ನಡೆಯಿತು.
Lಏ.23 ರಂದು ಪ್ರತಿಷ್ಠಾ ಬ್ರಹ್ಮಕಲಶೋತ್ಸವ ನಡೆಯಲಿದೆ.
ಬೆಳಗ್ಗೆ 5.30ಕ್ಕೆ ಶ್ರೀ ಮಹಾಗಣಪತಿ ಹವನ, ಕಲಶ ಪೂಜೆ, ಶುಭ ಮುಹೂರ್ತದ ಪ್ರತಿಷ್ಠಾ ಪೂಜೆಬೆಳಿಗ್ಗೆ 7.34ರಿಂದ 9.37ಕ್ಕೆ ಒದಗುವ ವೃಷಭ ಲಗ್ನದ ಸುಮೂಹೂರ್ತದಲ್ಲಿ ಬ್ರಹ್ಮಕಲಶೋತ್ಸವ, ಪ್ರಸಾದ ವಿತರಣೆ,ಮಧ್ಯಾಹ್ನ ಶ್ರೀ ದೇವಿಯ ನರ್ತನ ಸೇವೆ, ಮಹಾಪೂಜೆ, ಮಹಾ ಅನ್ನಸಂತರ್ಪಣೆ.ಸಂಜೆ ಗಂಟೆ 5.30ಕ್ಕೆ ಸಮಾರೋಪ
ಸಂಜೆ 6ಕ್ಕೆ ದೀಪಾರಾಧನೆ,ಸಂಜೆ 6.30ಕ್ಕೆ ಶ್ರೀ ಮಂತ್ರವಾದಿ ಗುಳಿಗ ದೈವದ ನೇಮೋತ್ಸವದೊಂದಿಗೆ ಪ್ರತಿಷ್ಠೆ ನಡೆಯಲಿದೆ.














