ಸುಳ್ಯ:ಎರಡು ದಿನಗಳ ಕಾಲ ನಡೆದ ಸುಳ್ಯದ ಶ್ರೀ ಗುರು ರಾಘವೇಂದ್ರ ಮಠದ 8ನೇ ವರ್ಷದ ಪ್ರತಿಷ್ಠಾ ವಾರ್ಷಿಕೋತ್ಸವ ಸಂಪನ್ನಗೊಂಡಿತು. ಏ 22 ರಂದ ಮುಂಜಾನೆಯಿಂದ ವಿವಿಧ ವೈದಿಕ ಕಾರ್ಯಕ್ರಮಗಳು, ಪೂಜೆ, ಹವನಗಳು ನಡೆಯಿತು.ಪೂರ್ವಾಹ್ನ 9ರಿಂದ
ಪಂಚ ವಿಂಶತಿ ಕಲಶ ಪೂಜೆ, ಕಲಶಾಭಿಷೇಕ, ಶ್ರೀ ರಾಘವೇಂದ್ರ ಅಷ್ಟಾಕ್ಷರಿ ಮಂತ್ರ ಹೋಮ, ಶ್ರೀ ರಾಮ ತಾರಕ ಮಂತ್ರ ಹೋಮ
ಮಧ್ಯಾಹ್ನ 12ಕ್ಕೆ ಅಲಂಕಾರ ಮಹಾಪೂಜೆ, ಅನ್ನಸಂತರ್ಪಣೆ ನಡೆಯಿತು. ಸಂಜೆ ಆಶ್ಲೇಷಾ ಬಲಿ ಪೂಜೆ ರಂಗಪೂಜೆ, ಮಹಾಪೂಜೆ, ಅನ್ನಸಂತರ್ಪಣೆ ನಡೆಯುವುದರೊಂದಿಗೆ ಪ್ರತಿಷ್ಠಾ ಮಹೋತ್ಸವ ಸಂಪನ್ನಗೊಂಡಿತು.
22 ರಂದು ಬೆಳಿಗ್ಗೆ ದೀಪಾಂಜಲಿ ಭಜನಾ ಮಂಡಳಿ ಶಾಂತಿನಗರ.
ಸಂಜೆ ಶ್ರೀ ಸದಾಶಿವ ಭಜನಾ ಮಂಡಳಿ ಆಲೆಟ್ಟಿ ಇವರಿಂದ ಭಜನಾ ಕಾರ್ಯಕ್ರಮ ನಡೆಯಿತು.














