ಸುಳ್ಯ:ಪೈಚಾರ್ ಶ್ರೀ ಮಾರಿಯಮ್ಮ ವೀರಭದ್ರ ಸ್ವಾಮಿ ದೇವಸ್ಥಾನದಲ್ಲಿ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಏ.23ರಂದು ನಡೆಯಿತು. ತಂತ್ರಿಗಳಾದ ಬ್ರಹ್ಮಶ್ರೀ ಅಟ್ಟೋಳಿ ಇಲ್ಲತ್ ವಾಸುದೇವ ನಂಬೂದಿರಿ ಕುರುವೇಲಿ ಪಯ್ಯನ್ನೂರು ಇವರ ನೇತೃತ್ವದಲ್ಲಿ

ಏ.23 ರಂದು ಪ್ರತಿಷ್ಠಾ ಬ್ರಹ್ಮಕಲಶೋತ್ಸವ ನಡೆಯಿತು.ಮುಂಜಾನೆ ಶ್ರೀ ಮಹಾಗಣಪತಿ ಹವನ, ಕಲಶ ಪೂಜೆ, ಶುಭ ಮುಹೂರ್ತದ ಪ್ರತಿಷ್ಠಾ ಪೂಜೆ ನಡೆದು
ಬೆಳಿಗ್ಗೆ 7.34ರಿಂದ 9.37ಕ್ಕೆ ಒದಗುವ ವೃಷಭ ಲಗ್ನದ ಸುಮೂಹೂರ್ತದಲ್ಲಿ ಬ್ರಹ್ಮಕಲಶೋತ್ಸವ, ಪ್ರಸಾದ ವಿತರಣೆ,ಮಧ್ಯಾಹ್ನ ಶ್ರೀ ದೇವಿಯ ನರ್ತನ ಸೇವೆ, ಮಹಾಪೂಜೆ, ಮಹಾ ಅನ್ನಸಂತರ್ಪಣೆ ನಡೆಯಿತು.














