ಸುಳ್ಯ:ಯುವ ಸಮುದಾಯ ದುಶ್ಚಟಗಳಿಂದ ದೂರವಿದ್ದು ಸಮಾಜ ಕಟ್ಟಲು ಕೈ ಜೋಡಿಸಬೇಕು ಎಂದು ಪಾಣಕ್ಕಾಡ್ ಹಮಿದಾಲಿ ಶಿಹಾಬ್ ತಂಙಳ್ ಕರೆ ನೀಡಿದ್ದಾರೆ.ಪೇರಡ್ಕ ಗೂನಡ್ಕ ವಲಿಯುಲ್ಲಾಹಿ ದರ್ಗಾ ಶರೀಫ್ ಉರೂಸ್ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಇಂದಿನ ಕಾಲದಲ್ಲಿ ಸಮಾಜಕ್ಕೆ ಆಸ್ತಿಯಾಗಬೇಕಾದ
ಯುವ ಜನಾಂಗ ಮಾದಕ ವಸ್ತುಗಳೆಡೆಗೆ ಆಕರ್ಷಣೆಯಾಗಿ ಸಮಾಜ ಕಟ್ಟುವ ಬದಲು ಸಮಾಜಕ್ಕೆ ಕಂಠಕರಾಗುವುದು ಖೇದಕರ ಎಂದು
ಅವರು ಹೇಳಿದರು.ಪೇರಡ್ಕ ಮುಹಿಯುದ್ದೀನ್ ಜುಮಾ ಮಸೀದಿಯ ಅಧ್ಯಕ್ಷ ಟಿ.ಎಂ ಶಹೀದ್ ತೆಕ್ಕಿಲ್ ವಹಿಸಿದ್ದರು. ಖತೀಬರಾದ ಅಹಮ್ಮದ್ ನಈಮ್ ಫೈಝಿ ಅಲ್ ಮುಹ್ಬರಿ ದುವಾ ನೆರವೇರಿಸಿದರು. ಖ್ಯಾತ ವಾಗ್ಮಿ ಅಬ್ದುಲ್ ರಝಾಕ್ ಅಬ್ರಾರಿ ಪತ್ತನಂತಿಟ್ಟ ಧಾರ್ಮಿಕ ಉಪನ್ಯಾಸ ನೀಡಿದರು.

ಸಮಾರಂಭದಲ್ಲಿ ರಿಯಾಝ್ ಫೈಝಿ ಎಮ್ಮೆಮ್ಮಾಡು, ಸಂಪಾಜೆ ಜುಮಾ ಮಸೀದಿ ಖತೀಬರಾದ ಜಮಾಲುದ್ದೀನ್ ಅಮಾನಿ,ಅರಂಬೂರು ಜುಮಾ ಮಸೀದಿ ಖತೀಬರಾದ ಮೊಯಿನುದ್ಧೀನ್ ಫೈಝಿ, ಕಲ್ಲುಗುಂಡಿ ಜಮಾಅತ್ ಅಧ್ಯಕ್ಷ ಆಲಿಹಾಜಿ, ಸಂಪಾಜೆ ಜಮಾಅತ್ ಅಧ್ಯಕ್ಷ ಮಹಮ್ಮದ್ ಹಮೀದಿಯ, ಅರಂತೋಡು ಜಮಾಅತ್ ಅಧ್ಯಕ್ಷ ಅಶ್ರಫ್ ಗುಂಡಿ, ಸುಳ್ಯ ತಾಲೂಕು ಮದರಸ ಮ್ಯಾನೇಜ್ ಮೆಂಟ್ ಅಧ್ಯಕ್ಷ ತಾಜ್ ಮೊಹಮ್ಮದ್ ಸಂಪಾಜೆ, ಸಮಸ್ತ ಸಂಯುಕ್ತ ಜಮಾಅತ್ ಕೋಶಾಧಿಕಾರಿ ಹಮೀದ್ ಹಾಜಿ ಸುಳ್ಯ, ಗಾಂಧಿನಗರ ಜಮಾಅತ್ ಕಾರ್ಯದರ್ಶಿ ಹಾಜಿ ಮೊಯಿದ್ದೀನ್ ಪ್ಯಾನ್ಸಿ, ಸುಳ್ಯ ಅನ್ಸಾರಿಯ ಎಜ್ಯುಕೇಶನ್ ಸೆಂಟರ್ ಕಾರ್ಯದರ್ಶಿ ಲತೀಫ್ ಹರ್ಲಡ್ಕ, ಅರಂತೋಡು ಎ.ಹೆಚ್.ವೈ.ಎ ಅಧ್ಯಕ್ಷ ಎಸ್.ಎಂ ಅಬ್ದುಲ್ ಮಜೀದ್, ಉದ್ಯಮಿ ಸೈಫುದ್ದೀನ್ ಪಠೇಲ್, ಅಬ್ದುಲ್ ರಝಾಕ್ ಹಾಜಿ ಸುಳ್ಯ, ಅಕ್ಬರ್ ಕರಾವಳಿ, ನೌಶಾದ್ ಅಝ್ಹರಿ, ಕಾರ್ಯದರ್ಶಿ ಪಿ.ಕೆ ಉಮ್ಮರ್ ಗೂನಡ್ಕ, ಕೋಶಾಧಿಕಾರಿ ತೆಕ್ಕಿಲ್ ಮೊಹಮ್ಮದ್ ಕುಂಞಿಪೇರಡ್ಕ, ಉಪಾಧ್ಯಕ್ಷ ಟಿ.ಬಿ ಹನೀಫ್ ದರ್ಖಾಸ್, ಎಸ್.ಕೆ.ಎಸ್ .ಎಸ್ .ಎಫ್ ಅಧ್ಯಕ್ಷ ಮುನೀರ್ ದಾರಿಮಿ, ಕಲ್ಲುಗುಂಡಿ, ಎಸ್.ಕೆ.ಎಸ್ .ಎಸ್ .ಎಫ್ ಹಸೈನಾರ್ ಚಟ್ಟೆಕಲ್ಲು ಮೊದಲಾದವರು ಉಪಸ್ಥಿತರಿದ್ದರು. ಎಂ.ಆರ್.ಡಿ.ಎ ಅಧ್ಯಕ್ಷ ಜಿ.ಕೆ ಹಮೀದ್ ಗೂನಡ್ಕ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.ಇದೆ ಸಂಧರ್ಭದಲ್ಲಿ ಪಾಣಕ್ಕಾಡ್ ಹಮೀದ್ ಅಲಿ ತಂಙಳ್ ಅವರನ್ನು ಪೇರಡ್ಕ ಜಮಾಅತ್ ವತಿಯಿಂದ ಸನ್ಮಾನಿಸಲಾಯಿತು.