ಸುಳ್ಯ: ಕಳಂಜ, ಬಾಳಿಲ, ಕೃಷಿ ಪತ್ತಿನ ಸಹಕಾರ ಸಂಘದ ಆಡಳಿತ ಮಂಡಳಿಗೆ ಫೆ.7ರಂದು ನಡೆಯುವ ಚುನಾವಣೆಯಲ್ಲಿ ಸಹಕಾರಿ ಸಮನ್ವಯ ರಂಗ ತಂಡದ ನೇತೃತ್ವದಲ್ಲಿ ಪಕ್ಷಾತೀತವಾಗಿ ಸ್ಪರ್ಧೆ ನಡೆಸಲಾಗುವುದು ಎಂದು ಸಂಘದ ಮಾಜಿ ಅಧ್ಯಕ್ಷ ಎನ್.ವಿಶ್ವನಾಥ ರೈ ಕಳಂಜ ಹೇಳಿದ್ದಾರೆ. ಸುಳ್ಯ ಪ್ರೆಸ್ ಕ್ಲಬ್ನಲ್ಲಿ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ಅವರು ಎಲ್ಲಾ 13 ಸ್ಥಾನಗಳಿಗೂ
ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಲಾಗಿದೆ. ಸಂಘದ ಸಾಲ ವಸೂಲಾತಿ ಪ್ರಮಾಣ ಹೆಚ್ಚಿಸುವುದು, ಸಂಘದ ವ್ಯಾಪಾರ ವ್ಯವಹಾರದಲ್ಲಿ ಅಭಿವೃದ್ಧಿ ಮಾಡುವುದು, ದುಂದು ವೆಚ್ಚವನ್ನು ಕಡಿತ ಮಾಡುವುದು, ಸದಸ್ಯರಿಗೆ ಗರಿಷ್ಠ ಡಿವಿಡೆಂಟ್ ನೀಡುವುದು ನಮ್ಮ ತಂಡದ ಉದ್ದೇಶ ಎಂದು ಅವರು ಹೇಳಿದರು.
ಅಭ್ಯರ್ಥಿಗಳಾಗಿ ಸಾಮಾನ್ಯ ಕ್ಷೇತ್ರದಿಂದ ಎನ್.ವಿಶ್ವನಾಥ ರೈ, ಸುಭಾಶ್ಚಂದ್ರ ತೋಟ, ಸುಬ್ರಹ್ಮಣ್ಯ ಕಾವಿನಮೂಲೆ, ಕೆ.ಪಿ.ಶೇಖರ ಗೌಡ, ಬಾಲಕೃಷ್ಣ ರೈ ಪಾದೆಕಲ್ಲು, ಸುಬ್ರಾಯ ಭಾರದ್ವಾಜ್ ಕೆದಿಲ, ಈಶ್ವರ ಗೌಡ ಕಜೆಮೂಲೆ, ಮಹಿಳಾ ಮೀಸಲು ಕ್ಷೇತ್ರದಿಂದ ಸರಸ್ವತಿ ಕಾಮತ್, ಶೈಲಜಾ ಎಸ್.ಪೂಜಾರಿ, ಹಿಂದುಳಿದ ವರ್ಗ ಎ ಕ್ಷೇತ್ರದಿಂದ ಶ್ರೀಧರ ನಾಯಕ್ ಪಂಜಿಗಾರು, ಹಿಂದುಳಿದ ವರ್ಗ ಬಿ ಕ್ಷೇತ್ರದಿಂದ ಗಂಗಾಧರ ಗೌಡ ಕಾಯಾರ, ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರದಿಂದ ರಮೇಶ ಕೆ, ಪರಿಶಿಷ್ಟ ಪಂಗಡ ಮೀಸಲು ಕ್ಷೇತ್ರದಿಂದ ವಿಶ್ವನಾಥ ಎಂ. ಸ್ಪರ್ಧಿಸುತ್ತಿದ್ದಾರೆ ಎಂದು ಅವರು ವಿವರಿಸಿದರು.
ಸುದ್ದಿಗೋಷ್ಠಿಯಲ್ಲಿ ಅಭ್ಯರ್ಥಿಗಳಾದ ಕೆ.ಪಿ.ಶೇಖರ ಗೌಡ, ಬಾಲಕೃಷ್ಣ ರೈ ಪಾದೆಕಲ್ಲು, ಗಂಗಾಧರ ಗೌಡ ಕಾಯಾರ ಉಪಸ್ಥಿತರಿದ್ದರು.