ಸುಳ್ಯ: ಸಾತ್ವಿಕರಾದ ಔಲಿಯಾಗಳು ಅಲ್ಲಾಹನ ಇಷ್ಟದಾಸರಾಗಿದ್ದಾರೆ. ನೈಜ ವಿಶ್ವಾಸ, ನಿಷ್ಕಳಂಕ ಸತ್ಕರ್ಮಗಳು ಮತ್ತು ಪರಮೋನ್ನತ ಆಧ್ಯಾತ್ಮ ಶಕ್ತಿಗಳ ಮೂಲಕ ಅಲ್ಲಾಹನ ಪ್ರೀತಿ ಪಾತ್ರರಾದ ಇಂತಹ ಮಹಾನುಭಾವರಿಂದ ಈ ಜಗತ್ತಿನಲ್ಲಿ ಧಾರ್ಮಿಕತೆ, ಶಾಂತಿ ಮತ್ತು ನೆಮ್ಮದಿ ನೆಲೆ ನಿಂತಿದೆ. ನೈತಿಕ ಮೌಲ್ಯಗಳೊಂದಿಗೆ ಸಜ್ಜನರಾಗಿ ಬಾಳಲು ನಾವು ಅವರ ಬದುಕನ್ನು ಮಾದರಿಯಾಗಿಸಬೇಕು ಎಂದು
ಸಮಸ್ತ ಕೇಂದ್ರ ಮುಶಾವರ ಸದಸ್ಯರಾದ ಶೈಖುನಾ ಉಸ್ಮಾನುಲ್ ಫೈಝಿ ತೋಡಾರ್ ಕರೆ ನೀಡಿದರು. ಪೇರಡ್ಕ ಗೂನಡ್ಕ ಮಖಾಂ ಉರೂಸಿನ ಎರಡನೇ ದಿನದ ಕಾರ್ಯಕ್ರಮವನ್ನು ತೆಕ್ಕಿಲ್ ಮೊಹಮದ್ ಹಾಜಿ ವೇದಿಕೆಯಲ್ಲಿ ಉದ್ಘಾಟಿಸಿ ಮಾತನಾಡಿದರು.
ಮುಖ್ಯ ಪ್ರಭಾಷಣ ನಡೆಸಿದ ಸ್ಥಳೀಯ ಖತೀಬರಾದ ಅಹ್ಮದ್ ನಈಂ ಫೈಝಿ ಅಲ್ ಮಅಬರಿಯವರು, ನಾವೆಲ್ಲರೂ ಪರಸ್ಪರ ಸಾಮರಸ್ಯದಿಂದ ಸಹಬಾಳ್ವೆ ನಡೆಸಿದರೆ ಮಾತ್ರ ನೈಜ ಸತ್ಯ ವಿಶ್ವಾಸಿಗಳಾಗಲು ಸಾಧ್ಯ. ಸಹಜೀವಿಗಳೊಂದಿಗೆ ಪ್ರೀತಿಯಿಂದ ಬೆರೆಯಲು ಸಾಧ್ಯವಾಗದವರಿಗೆ ಅಲ್ಲಾಹನ ಪ್ರೀತಿ ಗಳಿಸಲು ಸಾಧ್ಯವಿಲ್ಲ ಎಂದು ಹೇಳಿದರು.

ದಫ್ ಪ್ರದರ್ಶನ, ಬುರ್ದಾ ಮಜ್ಲಿಸ್, ರಸೂಲ್ ಮಾದಹ್ ಗಾನಂ ನಡೆಯಿತು.
ಪೇರಡ್ಕ ಜುಮಾ ಮಸೀದಿ ಮಾಜಿ ಅಧ್ಯಕ್ಷ ಹಾಜಿ ಇಬ್ರಾಹಿಂ ಮೈಲಿಕಲ್ಲು ಸಭಾಧ್ಯಕ್ಷತೆ ವಹಿಸಿದರು. ಪೇರಡ್ಕ ಮಸೀದಿ ಅಧ್ಯಕ್ಷರಾದ ಟಿ.ಎಂ ಶಹೀದ್ ತೆಕ್ಕಿಲ್, ಕಲ್ಲುಗುಂಡಿ ಜುಮಾ ಮಸೀದಿ ಖತೀಬ್ ಉಸ್ತಾದ್ ಅಬ್ದುನ್ನಾಸಿರ್ ದಾರಿಮಿ, ಸಂಪಾಜೆ ಜುಮಾ ಮಸೀದಿ ಖತೀಬ್ ಉಸ್ತಾದ್ ಜಮಾಲುದ್ದೀನ್ ಅಮಾನಿ, ಐವರ್ನಾಡು ಖತೀಬ್ ಉಸ್ತಾದ್ ಅಬ್ದುಲ್ ಖಾದರ್ ಫೈಝಿ, ಅರಂತೋಡು ಖತೀಬ್ ಉಸ್ತಾದ್ ಇಸ್ಮಾಯಿಲ್ ಫೈಝಿ ಗಟ್ಟಮನೆ, ಅರಂಬೂರ್ ಖತೀಬ್ ಉಸ್ತಾದ್ ಮುಯೀನುದ್ದೀನ್ ಫೈಝಿ ಸಮಸ್ತ ಸಂಯುಕ್ತ ಜಮಾತ್ ಅಧ್ಯಕ್ಷರಾದ ಅಬ್ದುಲ್ ಖಾಡರ್ ಹಾಜಿ ಬಯಂಬಾಡಿ, ಬೆಳ್ಳಾರೆ ಜುಮಾ ಮಸ್ಜಿದ್ ಅಧ್ಯಕ್ಷರಾದ ಅಬೂಬಕ್ಕರ್ ಹಾಜಿ ಮಂಗಳ, ಎಸ್ ಶಂಸುದ್ದಿನ್, ಪಿ ಎ ಮಹಮದ್,ಶರೀಫ್ ನಿಡುಬೆ,ಅಸೈನಾರ್ ಹಾಜಿ ಧರ್ಮತನ್ನಿ ಅಬ್ದುಲ್ ಹಮೀದ್ ಮುಸ್ಲಿಯರ್, ಹಾರಿಸ್ ಖಾಮಿಲ್ ಆಜ್ಹಹರಿ ಅಕ್ಬರ್ ಕರಾವಳಿ ತೆಕ್ಕಿಲ್ ಮೋಹಮದ್ ಕುಂಞಿ ಆಶಿಕ್ ಕೆ ಎಚ್ ಮೊದಲಾದವರು ಉಪಸ್ಟಿತರಿದ್ದರು.ಎಂ ಆರ್ ಡಿ ಎ ಅಧ್ಯಕ್ಷರಾದ ಜಿ ಕೆ ಹಮೀದ್ ಗೂನಡ್ಕ ಸ್ವಾಗತಿಸಿ ಮುನೀರ್ ದಾರಿಮಿ ವಂದಿಸಿದರು.