ನಳೀಲು: ಮುಕ್ಕೂರು ಶ್ರೀ ಉಳ್ಳಾಲ್ತಿ ಭಕ್ತವೃಂದದ ಸದಸ್ಯರಿಗೆ ಶ್ರೀ ನಳೀಲು ಸುಬ್ರಹ್ಮಣ್ಯ ಕ್ಷೇತ್ರದ ವತಿಯಿಂದ ಟೀ ಶರ್ಟ್ ವಿತರಣೆಯು ಫೆ.2 ರಂದು ನಳೀಲು ಶ್ರೀ ಕ್ಷೇತ್ರದಲ್ಲಿ ನಡೆಯಿತು.ಕಳೆದ ಬ್ರಹ್ಮಕಲಶದ ಸಂದರ್ಭದಲ್ಲಿ ನಳೀಲು ಕ್ಷೇತ್ರದಲ್ಲಿ ಹಾಗೂ ವಿವಿಧ ದೇವಾಲಯದಲ್ಲಿ ಕರಸೇವೆಗೈಯುತ್ತಿರುವ ಉಳ್ಳಾಲ್ತಿ ಭಕ್ತವೃಂದಕ್ಕೆ ನಳೀಲು ಕ್ಷೇತ್ರದ ಪರವಾಗಿ ಆಡಳಿತ ಮೊಕ್ತೇಸರ ಸಂತೋಷ್ ಕುಮಾರ್ ರೈ ನಳೀಲು ಅವರು ಟೀ ಶರ್ಟ್ ವಿತರಿಸಿದರು. ಮುಕ್ಕೂರಿನ ಉಳ್ಳಾಲ್ತಿ ಭಕ್ತವೃಂದದ
ಸದಸ್ಯರು ಕ್ಷೇತ್ರದ ಮೇಲಿಟ್ಟಿರುವ ಭಕ್ತಿ, ಪ್ರೀತಿ, ಕರಸೇವೆಯ ಮೂಲಕ ತೋರಿರುವ ಸೇವೆ ಸ್ಮರಣೀಯ. ಅವರಿಗೆ ಸುಬ್ರಹ್ಮಣ್ಯ ದೇವರು ಸದಾ ಒಳಿತನ್ನು ಉಂಟು ಮಾಡಲಿ. ಅದೇ ರೀತಿ ಟೀ ಶರ್ಟ್ ಅನ್ನು ಬೇರೇ ಬೇರೇ ಧಾರ್ಮಿಕ ಕೇಂದ್ರಗಳಲ್ಲಿ ಕರಸೇವೆ ಮಾಡುವ ಸಂದರ್ಭದಲ್ಲಿ ಬಳಸಿದಾಗ ಅದರ ಮೌಲ್ಯ ಹೆಚ್ಚಾಗುತ್ತದೆ ಎಂದು ಅವರು ಹೇಳಿದರು.
ಸುಮಾರು 40 ಮಂದಿ ಉಳ್ಳಾಲ್ತಿ ಭಕ್ತವೃಂದದ ಸದಸ್ಯರಿಗೆ ಕ್ಷೇತ್ರದಲ್ಲಿ ಟೀ ಶರ್ಟ್ ನೀಡಲಾಯಿತು.

ಈ ಸಂದರ್ಭದಲ್ಲಿ ಕ್ಷೇತ್ರದ ಪ್ರಧಾನ ಅರ್ಚಕ ಪ್ರವೀಣ್ ಶಂಕರ ಭಟ್, ಕಾರ್ಯಾಲಯ ಸಮಿತಿಯ ಸುರೇಶ್ ರೈ ವಿಟ್ಲ, ಜಾತ್ರೋತ್ಸವ ಸಮಿತಿ ಅಧ್ಯಕ್ಷ ಪ್ರವೀಣ್ ರೈ ನಡುಕೂಟೇಲು, ಉಪಾಧ್ಯಕ್ಷ ಸುಬ್ರಾಯ ಗೌಡ ಪಾಲ್ತಾಡಿ, ಅಭಿವೃದ್ಧಿ ಸಮಿತಿ ಕಾರ್ಯದರ್ಶಿ ಸುರೇಶ್ಚಂದ್ರ ರೈ ಪಾಲ್ತಾಡಿ, ಮೊಕ್ತೇಸರರಾದ ನಾರಾಯಣ ರೈ ಮೊದಲ್ಕಾಡಿ, ಸತೀಶ್ ರೈ ನಳೀಲು, ಪ್ರವೀಣ್ ಕುಮಾರ್ ನಳೀಲು, ಜಾತ್ರಾ ಸಮಿತಿ ಪ್ರ.ಕಾರ್ಯದರ್ಶಿ ಪ್ರವೀಣ್ ಚೆನ್ನಾವರ, ವೀಣಾ ಸಂತೋಷ್ ರೈ, ಮುಕ್ಕೂರು ಶ್ರೀ ಉಳ್ಳಾಲ್ತಿ ಭಕ್ತವೃಂದದ ಯಶವಂತ ಜಾಲು, ದಿನೇಶ್ ಕಂರ್ಬುತ್ತೋಡಿ, ಜಯಂತ ಗೌಡ ಕುಂಡಡ್ಕ, ಭಾಸ್ಕರ ಎನ್ ಕುಂಡಡ್ಕ, ಪುಟ್ಟಣ್ಣ ಗೌಡ ಅಡ್ಯತಕಂಡ ಸಹಿತ ಸರ್ವ ಸದಸ್ಯರು ಉಪಸ್ಥಿತರಿದ್ದರು.