ಮುಲ್ಲನಪುರ: ಪಂಜಾಬ್ ಕಿಂಗ್ಸ್ ತಂಡವು ಲಖನೌ ಸೂಪರ್ ಜೈಂಟ್ಸ್ ತಂಡವನ್ನು 54 ರನ್ಗಳಿಂದ ಮಣಿಸಿ, ಹಾಲಿ ಐಪಿಎಲ್ ಟೂರ್ನಿಯಲ್ಲಿ ಅಜೇಯ ಓಟ ಮುಂದುವರಿಸಿದೆ. ಮೊದಲು ಬ್ಯಾಟ್ ಮಾಡಿದ ಪಂಜಾಬ್ ತಂಡ ಬೃಹತ್ ಮೊತ್ತ ಪೇರಿಸಿತು. ಆರಂಭಿಕ ಬ್ಯಾಟರ್
ಪ್ರಿಯಾಂಶ್ ಆರ್ಯ (93; 37ಎ, 4X4, 6X9) ಮತ್ತು ಕೂಪರ್ ಕೊನೋಲಿ (87; 46ಎ, 4X8, 6X7) ಅವರ ಬ್ಯಾಟಿಂಗ್ ಬಲದಿಂದ 7 ವಿಕೆಟ್ಗಳಿಗೆ 254 ರನ್ಗಳ ಬೃಹತ್ ಮೊತ್ತ ಗಳಿಸಿತು.
ಗುರಿ ಬೆನ್ನಟ್ಟಿದ ಲಖನೌ ತಂಡವು 5 ವಿಕೆಟ್ಗೆ 200 ರನ್ ಗಳಿಸಿ ಹೋರಾಟ ಮುಗಿಸಿತು. ಇದರೊಂದಿಗೆ ಶ್ರೇಯಸ್ ಅಯ್ಯರ್ ಪಡೆಯು ಹ್ಯಾಟ್ರಿಕ್ ಸೇರಿ ಐದನೇ ಗೆಲುವು ಸಾಧಿಸಿತು. ಪಂಜಾಬ್ ತಂಡದ ಮೂರನೇ ಪಂದ್ಯವು ಮಳೆಯಿಂದಾಗಿ ರದ್ದಾಗಿತ್ತು. ರಿಷಭ್ ಪಂತ್ ಬಳಗವು ಹ್ಯಾಟ್ರಿಕ್ ಸೋಲು ಅನುಭವಿಸಿತು.
ಲಖನೌ ತಂಡಕ್ಕೆ ಮಿಚೆಲ್ ಮಾರ್ಷ್ (40;28ಎ) ಮತ್ತು ಆಯುಷ್ ಬದೋನಿ (35;21),ರಿಷಭ್ ಪಂತ್ (43;23ಎ), ಏಡನ್ ಮರ್ಕರಂ (42;22ಎ) ಮತ್ತು ಮುಕುಲ್ ಚೌಧರಿ (ಔಟಾಗದೇ 21) ಕೊಂಚ ಪ್ರತಿರೋಧ ತೋರಿದರೂ ಗೆಲುವಿಗೆ ಸಾಕಾಗಲಿಲ್ಲ.


















