ಸುಳ್ಯ: ಪೈಚಾರ್ ಶ್ರೀ ಮಾರಿಯಮ್ಮ ವೀರಭದ್ರ ಸ್ವಾಮಿ ದೇವಸ್ಥಾನದಲ್ಲಿ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಇಂದಿನಿಂದ (ಏ.20) ಏ.23ರ ತನಕ ನಡೆಯಲಿದೆ.ಸುಳ್ಯದ ಪೈಚಾರಿನಲ್ಲಿ ನೆಲೆ ನಿಂತಿರುವ ಕಾರಣಿಕ ದೈವಿಕ ಶಕ್ತಿಗಳಾದ ಮಾರಿಯಮ್ಮ ಹಾಗೂ ಉಪದೈವಗಳಾದ ವೀರಭದ್ರ ಹಾಗೂ ಗುರುಗಳಿಗೆ ಗುಡಿಗಳು ನಿರ್ಮಾಣ ಮಾಡಲಾಗಿದ್ದು ತಂತ್ರಿಗಳಾದ
ಬ್ರಹ್ಮಶ್ರೀ ಅಟ್ಟೋಳಿ ಇಲ್ಲತ್ ವಾಸುದೇವ ನಂಬೂದಿರಿ ಕುರುವೇಲಿ ಪಯ್ಯನ್ನೂರು ಇವರ ನೇತೃತ್ವದಲ್ಲಿ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ನಡೆಸಲಾಗುತ್ತಿದೆ.ಏ.20ರಂದುಸಂಜೆ ಗಂಟೆ 4ರಿಂದ ವಾಸ್ತುಶಿಲ್ಪಿ ಮಹೇಶ್ ಮುನಿಯಂಗಳ ಅವರಿಂದ ಪ್ರಾಸಾದ ಪರಿಗ್ರಹ ಪೂಜೆ ನಡೆಯಲಿದೆ. ಏ.21ರಂದು ಪೂ 10.30ಕ್ಕೆ ಹಸಿರುವಾಣಿ ಮೆರವಣಿಗೆ ನಡೆಯಲಿದೆ. ವೈಚಾರು ವೃತ್ತದಿಂದ ಚಾಲನೆ ನೀಡಲಾಗುವುದು. ಏಪ್ರಿಲ್ 21 ರಂದು ಸಂಜೆ 5ಕ್ಕೆ ತಂತ್ರಿಗಳ ಆಗಮನ ಬಳಿಕ ವಿವಿಧ ವೈದಿಕ ಕಾರ್ಯಕ್ರಮಗಳು ನಡೆಯಲಿದೆ.
ಏ.22ರಂದು ಪೂರ್ವಾಹ್ನ 6ಕ್ಕೆ ದೀಪಾರಾಧನೆ, ಸಾಮೂಹಿಕ ಪ್ರಾರ್ಥನೆ, ಶ್ರೀದೇವಿಯ ಮೂಲವಿಗ್ರಹವನ್ನು ದೇವಸ್ಥಾನಕ್ಕೆ ತರುವುದು
ಬೆಳಿಗ್ಗೆ 6.30ಕ್ಕೆ ಶ್ರೀ ಮಹಾಗಣಪತಿ ಹೋಮ, ಬಿಂಬಶುದ್ಧಿ, ಬಿಂಬ ಪರಿಗ್ರಹ, ಅನುಜ್ಞಾ ಪ್ರಾರ್ಥನೆ ನಡೆಯಲಿದೆ.ರಾತ್ರಿ 7ರಿಂದ ದೇವಿಪೂಜೆ, ಶಯ್ಯಾ ಪೂಜೆ, ಅದಿವಾಸ ಹೋಮ, ಅತ್ತಾಳ ಪೂಜೆ. ಸಂಜೆ 5ಕ್ಕೆ ಸ್ಥಳೀಯರಿಂದ ಸಾಂಸ್ಕೃತಿಕ ಕಾರ್ಯಕ್ರಮ.ಸಂಜೆ 7ರಿಂದ ಸಭಾ ಕಾರ್ಯಕ್ರಮ ನಡೆಯಲಿದ್ದು ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಶ್ರೀಧಾನ ಮಾಣಿಲ, ಸಂಸದ ಕ್ಯಾ.ಬ್ರಿಜೇಶ್ ಚೌಟ, ಶಾಸಕರಾದ ಭಾಗೀರಥಿ ಮುರುಳ್ಯ,ಗುರುರಾಜ್ ಗಂಟಿಹೊಳೆ ಮತ್ತಿತರ ಪ್ರಮುಖರು ಭಾಗವಹಿಸಲಿದ್ದಾರೆ.
ರಾತ್ರಿ 8.30ರಿಂದ ಛತ್ರಪತಿ ಶಿವಾಜಿ ನಾಟಕ ಪ್ರದರ್ಶನ ನಡೆಯಲಿದೆ.
ಏ.23 ರಂದು ಬೆಳಗ್ಗೆ 5.30ಕ್ಕೆ ಶ್ರೀ ಮಹಾಗಣಪತಿ ಹವನ, ಕಲಶ ಪೂಜೆ, ಶುಭ ಮುಹೂರ್ತದ ಪ್ರತಿಷ್ಠಾ ಪೂಜೆ ಬೆಳಿಗ್ಗೆ 7.34ರಿಂದ 9.37ಕ್ಕೆ ಒದಗುವ ವೃಷಭ ಲಗ್ನದ ಸುಮೂಹೂರ್ತದಲ್ಲಿ ಬ್ರಹ್ಮಕಲಶೋತ್ಸವ, ಪ್ರಸಾದ ವಿತರಣೆ,ಮಧ್ಯಾಹ್ನ ಶ್ರೀ ದೇವಿಯ ನರ್ತನ ಸೇವೆ, ಮಹಾಪೂಜೆ, ಮಹಾ ಅನ್ನಸಂತರ್ಪಣೆ ಸಂಜೆ ಗಂಟೆ 5.30ಕ್ಕೆ ಸಮಾರೋಪ
ಸಂಜೆ 6ಕ್ಕೆ ದೀಪಾರಾಧನೆ ಸಂಜೆ 6.30ಕ್ಕೆ ಶ್ರೀ ಮಂತ್ರವಾದಿ ಗುಳಿಗ ದೈವದ ನೇಮೋತ್ಸವದೊಂದಿಗೆ ಪ್ರತಿಷ್ಠೆ ನಡೆಯಲಿದೆ.


















