ಪಂಜ: ಪಂಜ ಸೀಮೆಯ ಶ್ರೀ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಗಣೇಶ ಚತಿರ್ಥಿಯನ್ನು ವಿಜ್ರಂಭಣೆಯಿಂದ ಆಚರಿಸಲಾಯಿತು. ಗಣೇಶ ಚತುರ್ಥಿ ಪ್ರಯುಕ್ತ ಗಣಹವನ, ಸಾಮೂಹಿಕ ಅಪ್ಪಕಜ್ಜಾಯ ಸೇವೆ, ಕದಿರು ವಿತರಣೆ ಜರುಗಿತು. ಬೆಳಿಗ್ಗೆ ದೇಗುಲದ
ಗದ್ದೆಯಿಂದ ಕದಿರು ಚೆಂಡೆ,ವಾದ್ಯ ಶಂಖ ನಾದದೊಂದಿಗೆ ತಂದು ದೇಗುಲಕ್ಕೆ ಹಾಗೂ ದೇಗುಲದ ದೈವಸ್ಥಾನಗಳಿಗೆ ಕದಿರು ಕಟ್ಟಿ ಬೆಳಿಗ್ಗಿನ ಪೂಜೆ ಬಳಿಕ ಭಕ್ತರಿಗೆ ಕದಿರು ವಿತರಣೆ ಜರುಗಿತು. ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಡಾ.ದೇವಿಪ್ರಸಾದ್ ಕಾನತ್ತೂರ್, ವ್ಯವಸ್ಥಾಪನಾ ಸಮಿತಿ ಸದಸ್ಯರು, ಸೀಮೆಯ ಭಕ್ತಾದಿಗಳು ಉಪಸ್ಥಿತರಿದ್ದರು.