ಕೊಲ್ಲಮೊಗ್ರ: ಕೊಲ್ಲಮೊಗ್ರು – ಕಲ್ಮಕಾರು ಲೋಕೋಪಯೋಗಿ ರಸ್ತೆಯಲ್ಲಿ ಗಡಿಕಲ್ಲು ಎಂಬಲ್ಲಿ ಮುಖ್ಯ ರಸ್ತೆಯ ಬದಿ ಬರೆ ಕುಸಿದು ಬಿದ್ದಿದ್ದು ಕಲ್ಮಕಾರಿಗೆ ಸಂಚಾರ ಸ್ಥಗಿತವಾಗುವ ಭೀತಿ ಎದುರಾಗಿದೆ. ರಸ್ತೆ ಬದಿ ಭಾರೀ ಪ್ರಮಾಣದಲ್ಲಿ
ಕುಸಿದಿದ್ದು ಇನ್ನಷ್ಟು ಕುಸಿಯುವ ಆತಂಕ ಇದ್ದು ಘನ ವಾಹನಗಳ ಸಂಚಾರವನ್ನು ನಿಷೇಧಿಸಲಾಗಿದೆ ಎಂದು ತಿಳಿದು ಬಂದಿದೆ. ಕಲ್ಮಕಾರಿಗೆ ಕೆ.ಎಸ್.ಆರ್.ಟಿ.ಸಿ ಬಸ್ ಮತ್ತಿತರ ಘನ ವಾಹನಗಳ ಸಂಚಾರಕ್ಕೆ ತಡೆ ಉಂಟಾಗಿದೆ. ರಸ್ತೆ ಬದಿ ಇನ್ನಷ್ಟು ಕುಸಿದರೆ ರಸ್ತೆ ಸಂಚಾರವೇ ಬಂದ್ ಆಗುವ ಅಪಾಯ ಇದೆ ಎಂದು ಸ್ಥಳೀಯರು ತಿಳಿಸಿದ್ದಾರೆ.