ಪಂಜ: ಪಂಜ ಶ್ರೀ ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇವಾಲಯದಲ್ಲಿ ವರ್ಷಾವಧಿ ಜಾತ್ರಾ ಮಹೋತ್ಸವದ ಪ್ರಯುಕ್ತ ಹಸಿರುವಣಾಣಿ ಸಮರ್ಪಣೆ ಫೆ.3 ರಂದು ನಡೆಯಿತು. ಪೂರ್ವಾಹ್ನ ಶ್ರೀ ದೇವರ ಸನ್ನಿಧಿಯಲ್ಲಿ ಪ್ರಾರ್ಥನೆ ಮಾಡಿ ಹಸಿರು ಕಾಣಿಕೆ ಸಂಗ್ರಹಣೆ ನಡೆಯಿತು. ಮಧ್ಯಾಹ್ನ ಮಹಾಪೂಜೆ, ನಿತ್ಯಬಲಿ ಅನ್ನಸಂತರ್ಪಣೆ ನಡೆಯಿತು. ಮುಂಜಾನೆಯಿಂದ

ಪಂಜ ಸೀಮೆಯ ಅನೇಕ ಊರುಗಳಲ್ಲಿ ಹಸಿರು ಕಾಣಿಕೆ ಸಂಗ್ರಹಿಸಿ ಸಂಜೆ ಪುತ್ಯ ಸತ್ಯ ಕಟ್ಟೆಯಲ್ಲಿ ಪ್ರಾರ್ಥಿಸಿ ಹಸಿರು ಕಾಣಿಕೆ ವೈಭವದ ಮೆರವಣಿಗೆ ಸಾಗಿ ದೇವಳಕ್ಕೆ ಸಮರ್ಪಣೆ ಗೊಂಡಿತ್ತು. ಮೆರವಣಿಗೆಯಲ್ಲಿ ಬ್ಯಾಂಡ್ ವಾಲಗ, ಸಿಂಗಾರಿ ಮೇಳ, ವಾಹನಗಳು
ಮೆರವಣಿಗೆಗೆ ಮೆರುಗು ನೀಡಿತು. ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಡಾ.ದೇವಿಪ್ರಸಾದ್ ಕಾನತ್ತೂರ್, ವ್ಯವಸ್ಥಾಪನಾ ಸಮಿತಿ ಸದಸ್ಯರು, ಗೌರವ ಸಲಹೆಗಾರರು, ವ್ಯವಸ್ಥಾಪನಾ ಸಮಿತಿ ಪೂರ್ವಾಧ್ಯಕ್ಷ ಪದ್ಮನಾಭ ರೈ ಅಗೋಳಿಬೈಲು ಗುತ್ತು, ಹಸಿರು ಕಾಣಿಕೆ ಸಂಗ್ರಹಣಾ ಸಂಚಾಲಕರಾದ ಸಂತೋಷ್ ರೈ ಬಳ್ಪ, ಶರತ್ ಕುದ್ವ, ಪವನ್ ಪಲ್ಲತ್ತಡ್ಕ, ಸದಸ್ಯರು, ಸೀಮೆಯ ಭಕ್ತಾದಿಗಳು ಪಾಲ್ಗೊಂಡಿದ್ದರು.
ಸಂಜೆ ಉಗ್ರಾಣ ತುಂಬಿಸಲಾಯಿತು.
