ಸುಳ್ಯ:ಉಬೈಸ್ ಗೂನಡ್ಕ ಅವರಿಗೆ ಸಿಲ್ವರ್ ಮೆಡಲ್ ಮತ್ತು ರಾಷ್ಟ್ರೀಯ ಪ್ರೇರಣಾ ದೂತ ಪ್ರಶಸ್ತಿ ಲಭಿಸಿದೆ. ರಾಮಕೃಷ್ಣ ಮಠದ ಕಾರ್ಯದರ್ಶಿ ಸ್ವಾಮಿ ಅತಿ ದೇವಾನಂದ ಮಹಾರಾಜ್, ಐಎಎಸ್ ಅಧಿಕಾರಿಗಳು ಮತ್ತು ಬಿಹಾರದ ಮಾಜಿ ಕಾರ್ಮಿಕ ಸಚಿವ ಸುರೇಂದ್ರ ರಾಂ ಅವರು ಪ್ರಶಸ್ತಿಪ್ರದಾನ ಮಾಡಿದರು.ಎನ್ಎಸ್ಎಸ್ ಕಾರ್ಯಚಟುವಟಿಕೆಯನ್ನು
ಗುರುತಿಸಿ ಬಿಹಾರ ಸರ್ಕಾರ ಮತ್ತು ಫೇಸ್ ಆಫ್ ಫ್ಯೂಚರ್ ಇಂಡಿಯಾ ಪ್ರಶಸ್ತಿಗೆ ಆಯ್ಕೆ ಮಾಡಿದೆ.ಉಬೈಸ್ ಯೆನೆಪೋಯಾ ವಿಶ್ವವಿದ್ಯಾಲಯದಲ್ಲಿ ಸಕ್ರಿಯ ಎನ್ಎಸ್ಎಸ್ ಸ್ವಯಂಸೇವಕರಾಗಿ, ಯೆನಪೋಯಾ ಕಾಲೇಜಿನ ವಿದ್ಯಾರ್ಥಿ ಪರಿಷತ್ ಕಾರ್ಯದರ್ಶಿಯಾಗಿ ರಾಷ್ಟ್ರೀಯ ಶಿಬಿರದಲ್ಲೂ ಭಾಗವಹಿಸಿದ್ದಾರೆ. ಪ್ರಸ್ತುತ ಅವರು ಯೆನಪೋಯಾ ವಿಶ್ವವಿದ್ಯಾಲಯದಲ್ಲಿ ಬಿಕಾಂ ಎಸಿಸಿಎ ಅಧ್ಯಯನ ನಡೆಸುತ್ತಿದ್ದಾರೆ. ಎನ್ಎಸ್ಯುಐ ದಕ್ಷಿಣ ಕನ್ನಡ ಪ್ರಧಾನ ಕಾರ್ಯದರ್ಶಿಯಾಗಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.