ಸುಳ್ಯ:ಸುಳ್ಯ ತಾಲೂಕು ಧ್ವನಿ ಜನನಬೆಳಕು ಮತ್ತು ಶಾಮಿಯಾನ ಮಾಲಕರ ಸಂಘದ ವತಿಯಿಂದ ಸಂಘದ 12ನೇ ವಾರ್ಷಿಕೋತ್ಸವದ ಅಂಗವಾಗಿ ರಾಷ್ಟ್ರೀಯ ಎ ಗ್ರೇಡ್ ಕಬಡ್ಡಿ ಚಾಂಪಿಯನ್ಶಿಪ್ ‘ಸುಳ್ಯ ಕಬಡ್ಡಿ ಉತ್ಸವ’ದ ಲೀಗ್ ಪಂದ್ಯದಲ್ಲಿ ಗೆದ್ದ ಎಂಟು ತಂಡಗಳು ಕ್ವಾರ್ಟರ್ ಫೈನಲ್ ಹಂತಕ್ಕೆ ಪ್ರವೇಶಿಸಿದೆ.12 ತಂಡಗಳು ಭಾಗವಹಿಸಿದ್ದ ಪಂದ್ಯಾಕೂಟದಿಂದ
ನಾಲ್ಕು ತಂಡಗಳು ಹೊರ ಬಿದ್ದವು.4 ಪೂಲ್ಗಳಿಂದ ತಲಾ ಎರಡು ತಂಡಗಳು ಕ್ವಾರ್ಟರ್ ಫೈನಲ್ ಪ್ರವೇಶಿಸಿದೆ.ಪೂಲ್ ಎಯಿಂದ ಬಿಪಿಸಿಎಲ್ ಮುಂಬೈ, ಫ್ರೆಂಡ್ಸ್ ಕಡಬ, ಪೂಲ್ ಬಿ ಯಿಂದ ಮುಂಬೈ ಪೋರ್ಟ್ ಮತ್ತು ಸೌತ್ ರೈಲ್ವೇ, ಪೂಲ್ ಸಿಯಿಂದ ಟಿ.ಎಂ.ಸಿ.ಥಾಣೆ ಮತ್ತು ಮಿನಿಸ್ಟ್ರಿ ಆಫ್ ಡಿಫೆನ್ಸ್, ಪೂಲ್ ಡಿಯಿಂದ ಐಎಫ್ಸಿ ಚೆನ್ನೈ ಮತ್ತು ಈಶ್ವರ್ ಬ್ರದರ್ಸ್ ಬೆಂಗಳೂರು ಕ್ವಾರ್ಟರ್ ಫೈನಲ್ ಪ್ರವೇಶಿಸಿದೆ.
ಕ್ವಾರ್ಟರ್ ಫೈನಲ್ನಲ್ಲಿ ಬಿಪಿಸಿಎಲ್ ಮುಂಬೈ ತಂಡವು ಈಶ್ವರ್ ಬ್ರದರ್ಸ್ ಬೆಂಗಳೂರು ತಂಡವನ್ನು ಎದುರಿಸಲಿದೆ.
ಟಿಎಂಸಿ ಥಾಣೆ ತಂಡ ಮತ್ತು ಸೌತ್ ರೈಲ್ವೇ ತಂಡ ಮುಖಾಮುಖಿಯಾಗಲಿದೆ. ಮುಂಬೈ ಪೋರ್ಟ್ ಹಾಗು ಮಿನಿಸ್ಟ್ರಿ ಆಫ್ ಡಿಫೆನ್ಸ್ ತಂಡಗಳು ಸೆಣಸಲಿದೆ.ಫ್ರೆಂಡ್ಸ್ ಕಡಬ ತಂಡವು ಐಎಫ್ಸಿ ತಂಡದ ವಿರುದ್ಧ ಆಡಲಿದೆ. ಪಂದ್ಯಾಕೂಟದ ಎರಡನೇ ದಿನವಾದ ಇಂದು ಕ್ವಾರ್ಟರ್ ಫೈನಲ್, ಸೆಮಿಫೈನಲ್ ಮತ್ತು ಫೈನಲ್ ಸೇರಿ ಒಟ್ಟು 7 ಪಂದ್ಯಗಳು ನಡೆಯಲಿದೆ.
ಮೊದಲ ದಿನ ತಡ ರಾತ್ರಿ ನಡೆದ ಪಂದ್ಯಗಳಲ್ಲಿ ಸೌತ್ ರೈಲ್ವೆ ತಂಡವು 36-32 ಪಾಯಿಂಟ್ ಅಂತರದಲ್ಲಿ ಆರ್ಡಿನರಿ ಫ್ಯಾಕ್ಟರಿ ತಂಡವನ್ನು ಪರಾಭವಗೊಳಿಸಿತು. ಐಎಫ್ಸಿ ಚೆನ್ನೈ ತಂಡವು ಈಶ್ವರ್ ಬ್ರದರ್ಸ್ ಬೆಂಗಳೂರು ತಂಡವನ್ನು 33-18 ಅಂತರದಲ್ಲಿ ಪರಾಭವಗೊಳಿಸಿತು.
ಬಿಪಿಸಿಎಲ್ ಮುಂಬೈ ತಂಡವು 18-12 ಆಂತರದಲ್ಲಿ ಫ್ರೆಂಡ್ಸ್ ಕ್ಲಬ್ ತಂಡವನ್ನು ಮಣಿಸಿತು. ಮುಂಬೈ ಪೋರ್ಟ್ ತಂಡವು 39-37 ಅಂತರದಲ್ಲಿ ಸೌತ್ ರೈಲ್ವೇ ತಂಡವನ್ನು ಸೋಲಿಸಿತು. ಟಿಎಂಸಿ ಥಾಣೆ ತಂಡವು ಜೀರೋ ಮೈಲ್ ಅಕಾಡೆಮಿ ನಾಗಪುರ ತಂಡವನ್ನು ಸೋಲಿಸಿದರೆ, ಈಶ್ವರ್ ಬ್ರದರ್ಸ್ ಬೆಂಗಳೂರು ತಂಡವು ಉಮಾಮಹೇಶ್ವರಿ ಬೆಂಗಳೂರು ತಂಡವನ್ನು ಪರಾಭವಗೊಳಿಸಿತು.









