ಸುಳ್ಯ:ಸುಳ್ಯ ತಾಲೂಕು ಧ್ವನಿ ಜನನಬೆಳಕು ಮತ್ತು ಶಾಮಿಯಾನ ಮಾಲಕರ ಸಂಘದ ವತಿಯಿಂದ ಸಂಘದ 12ನೇ ವಾರ್ಷಿಕೋತ್ಸವದ ಅಂಗವಾಗಿ ರಾಷ್ಟ್ರೀಯ ಎ ಗ್ರೇಡ್ ಕಬಡ್ಡಿ ಚಾಂಪಿಯನ್ಶಿಪ್ ‘ಸುಳ್ಯ ಕಬಡ್ಡಿ ಉತ್ಸವ’ದ ಲೀಗ್ ಪಂದ್ಯದಲ್ಲಿ
ಟಿಎಂಸಿ ಥಾಣೆ ತಂಡ ಜಯಭೇರಿ ಬಾರಿಸಿತು. ಟಿಎಂಸಿ ಥಾಣೆ ಮತ್ತು ಮಿನಿಸ್ಟ್ರಿ ಆಫ್ ಡಿಫೆನ್ಸ್ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ತಾಣೆ ತಂಡವು ಕೇವಲ ಒಂದು ಅಂಕದ ಅಂತರದಲ್ಲಿ ಗೆದ್ದು ಬಿಗಿತು. ಸ್ಕೊರ್ 31-30.ಪಂದ್ಯದಲ್ಲಿ ಎರಡು ತಂಡಗಳು ರಣರೊಚಕ ಹೋರಾಟವನ್ನು ನಡೆಸಿದ್ದು ಪಂದ್ಯದಲ್ಲಿ ನಾಲ್ಕುಬಾರಿ ಅಂಕ ಪಟ್ಟಿಯಲ್ಲಿ ಸಮಬಲದಲ್ಲಿ ಸಾಗಿದ್ದು ಅಂತಿಮ ಕ್ಷಣದವರೆಗೆ ವಿಜಯಲಕ್ಷ್ಮಿ ಚಂಚಲೆಯಾಗಿತ್ತು. ಕೊನೆಗೆ 1 ಅಂಕದಿಂದ ಟಿಎಂಸಿ ಥಾಣೆ ತಂಡವು ಪಂದ್ಯವನ್ನು ಗೆದ್ದುಕೊಂಡಿತು.









