ಕನ್ಯಾಕುಮಾರಿ:45 ಗಂಟೆಗಳ ಧ್ಯಾನ ಕೈಗೊಳ್ಳಲು ತಮಿಳುನಾಡಿನ ಕನ್ಯಾಕುಮಾರಿಯಲ್ಲಿರುವ ವಿವೇಕಾನಂದ ಸ್ಮಾರಕಕ್ಕೆ ಪ್ರಧಾನಿ ನರೇಂದ್ರ ಮೋದಿ ಗುರುವಾರ ಸಂಜೆ ತಲುಪಿದರು. ಲೋಕಸಭೆಯ 7ನೇ ಮತ್ತು ಅಂತಿಮ ಹಂತದ ಚುನಾವಣೆಯ ಬಹಿರಂಗ ಪ್ರಚಾರಕ್ಕೆ ತೆರೆಬಿದ್ದ ಬೆನ್ನಲ್ಲೇ
ಮೋದಿ ದೀರ್ಘ ಧ್ಯಾನ ಆರಂಭಿಸಿದ್ದಾರೆ. ಸ್ವಾಮಿ ವಿವೇಕಾನಂದರು ಧ್ಯಾನ ಕೈಗೊಂಡಿದ್ದ ಧ್ಯಾನ ಮಂಟಪದಲ್ಲಿ ಇಂದು ಸಂಜೆಯಿಂದ ಜೂನ್ 1ರವರೆಗೆ ಮೋದಿ ಧ್ಯಾನ ಮಾಡಲಿದ್ದಾರೆ.
ಕನ್ಯಾಕುಮಾರಿಗೆ ಆಗಮಿಸಿ ಭಗವತಿ ಅಮ್ಮನ್ ದೇಗುಲಕ್ಕೆ ತೆರಳಿದ ಮೋದಿ, ವಿಶೇಷ ಪ್ರಾರ್ಥನೆ ಸಲ್ಲಿಸಿದ್ದಾರೆ.ಧೋತಿ ಮತ್ತು ಬಿಳಿ ಶಾಲು ಹಾಕಿದ್ದ ಮೋದಿ ದೇಗುಲದಲ್ಲಿ ಪ್ರಾರ್ಥನೆ ಸಲ್ಲಿಸಿದ ಬಳಿಕ ಗರ್ಭ ಗುಡಿಯ ಪ್ರದಕ್ಷಿಣೆ ಹಾಕಿದರು. ಅರ್ಚಕರು ವಿಶೇಷ ಆರತಿ ಬೆಳಗಿ, ಪ್ರಸಾದದ ಜೊತೆಗೆ ಶಾಲು ಮತ್ತು ದೇವಿಯ ಫೋಟೊವನ್ನು ನೀಡಿದರು.
ಪ್ರಧಾನಿ ಮೋದಿ ಭೇಟಿ ಹಿನ್ನೆಲೆಯಲ್ಲಿ ಭದ್ರತೆ ಹೆಚ್ಚಿಸಲಾಗಿದೆ.