ತಿರುವನಂತಪುರಂ: ಕೇರಳ ವಿಷು ಬಂಪರ್ ಟಿಕೆಟ್ನ ಅದೃಷ್ಟವಂತರು ಆಲಪ್ಪುಯ ಜಿಲ್ಲೆಯ ಪಯವೀಡ್ನ ವಿಶ್ವಂಭರನ್. ಮೇ.29 ರಂದು ನಡೆದ ವಿಷು ಬಂಪರ್ ಲಾಟರಿ ಟಿಕೆಟ್ ಡ್ರಾದ ಮೊದಲ ಬಹುಮಾನ 12 ಕೋಟಿ ರೂ ವಿಶ್ವಂಭರನ್ ಅವರು ಖರೀದಿಸಿದ VC 490987 ನಂಬರ್ಗೆ ಲಭಿಸಿದೆ. ಬುಧವಾರ ಮಧ್ಯಾಹ್ನದ ಬಳಿಕ ಡ್ರಾ ನಡೆದರೂ
ರಾತ್ರಿ ವೇಳೆಗೆ ಲಾಟರಿ ಅದೃಷ್ಠ ಒಲಿದಿರುವುದು ತಿಳಿಯಿತು ಎಂದು ನಿವೃತ್ತ ಯೋಧರಾದ ವಿಶ್ವಂಭರನ್ ಹೇಳುತ್ತಾರೆ. ಯಾವಾಗಲು ಲಾಟರಿ ಖರೀದಿಸುವ ಹವ್ಯಾಸ ಇಟ್ಟುಕೊಂಡಿದ್ದರು. ಬಂಪರ್ ಲಾಟರಿ ಸೇರಿ ಪ್ರತಿ ಬಾರಿ ಲಾಟರಿ ಟಿಕೆಟ್ ಖರೀದಿಸುತ್ತಾರೆ 73 ವರ್ಷದ ವಿಶ್ವಂಭರನ್ ಅವರು. ಒಂದಕ್ಕಿಂತ ಹೆಚ್ಚು ಟಿಕೆಟ್ ಖರೀದಿಸುತ್ತಿದ್ದರು. ಈ ಬಾರಿ ವಿಷು ಅದೃಷ್ಠ ಚೆನ್ನಾಗಿ ಒಲಿದಿದೆ. 12 ಕೋಟಿ ಒಲಿದಿರುವುದರ ಜೊತೆಗೆ ಮತ್ತೊಂದು ಟಿಕೆಟ್ಗೆ 5 ಸಾವಿರದ ಬಹುಮಾನ ಕೂಡ ಬಂದಿದೆ. ಸಿಆರ್ಪಿಎಫ್ನಲ್ಲಿ ಸೇವೆ ಸಲ್ಲಿಸಿದ್ದ ಇವರು ಈಗ ವಿಶ್ರಾಂತ ಜೀವನದಲ್ಲಿರುವಾಗ ಅದೃಷ್ಟ ಒಲಿದು ಬಂದಿದೆ.