ಸುಳ್ಯ:ಗೋ ಸೇವಾ ಗತಿವಿಧಿ ಕರ್ನಾಟಕ, ರಾಧಾ ಸುರಭಿ ಗೋ ಮಂದಿರ, ರಾಷ್ಟ್ರೀಯ ಗೋ ಸೇವಾ ಸಂಸ್ಥಾನ ಟ್ರಸ್ಟ್ ಇದರ ಸಹಯೋಗದೊಂದಿಗೆ ರಾಜ್ಯದಾದ್ಯಂತ ಪ್ರಯಾಣಿಸುತ್ತಿರುವ ನಂದಿ ರಥಯಾತ್ರೆ ಮಾ.15ರಂದು ಸುಳ್ಯಕ್ಕೆ ಆಗಮಿಸಿತು. ಈ ಸಂದರ್ಭದಲ್ಲಿ ನಂದಿ ರಥಯಾತ್ರೆಗೆ ಭವ್ಯ ಸ್ವಾಗತ ನೀಡಲಾಯಿತು. ಸುಳ್ಯ ನಗರದ. ಜ್ಯೋತಿ ವೃತ್ತದಲ್ಲಿ ರಥವನ್ನು ಸ್ವಾಗತಿಸಲಾಯಿತು. ಶಾಸಕಿ ಭಾಗೀರಥಿ ಮುರುಳ್ಯ ಅವರು
ನಂದಿಗೆ ಹೂಹಾರ ಹಾಕಿ ಸ್ವಾಗತಿಸಿದರು. ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಷನ್ನ ಅಧ್ಯಕ್ಷ ಡಾ.ಕೆ.ವಿ.ಚಿದಾನಂದ ಹಾಗೂ ಪ್ರಮುಖರು ಪುಷ್ಪಾರ್ಚನೆ ಮಾಡಿ ಸ್ವಾಗತಿಸಲಾಯಿತು.

ಮಾಜಿ ಸಚಿವ ಎಸ್.ಅಂಗಾರ, ನಗರ ಪಂಚಾಯತ್ ಅಧ್ಯಕ್ಷೆ ಶಶಿಕಲಾ ನೀರಬಿದಿರೆ, ನಂದಿ ರಥಯಾತ್ರೆಯ ಸ್ವಾಗತ ಸಮಿತಿಯ ಅಧ್ಯಕ್ಷ ಅಕ್ಷಯ್.ಕೆ.ಸಿ., ಕಾರ್ಯಾಧ್ಯಕ್ಷ ಭಾರದ್ವಾಜ್, ಸಮಿತಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು. ಸುಬ್ರಹ್ಮಣ್ಯದಿಂದ ಹೊರಟ ರಥಯಾತ್ರೆಗೆ ವಿವಿಧ ಕಡೆ ಸ್ವಾಗತ, ನಂದಿ ಪೂಜೆ ನೀಡಲಾಯಿತು. ಸುಳ್ಯದ ಶಾಸ್ತ್ರಿ ವೃತ್ತದಲ್ಲಿ ಸ್ವಾಗತಿಸಿದ ಬಳಿಕ ಭವ್ಯ ಶೋಭಾಯಾತ್ರೆಯ ಮೂಲಕ ಶ್ರೀ ಚನ್ನಕೇಶವ ದೇವಸ್ಥಾನದ ಬಳಿಗೆ ರಥವನ್ನು ಕರೆ ತರಲಾಯಿತು. ಅಲ್ಲಿ ನಂದಿ ಪೂಜೆ, ವಿಷ್ಣು ಸಹಸ್ರನಾಮ ಪಠಣ, ಸಭಾ ಕಾರ್ಯಕ್ರಮ ನಡೆಯಿತು.
