ಸುಳ್ಯ:ರಾಮ ಮಂದಿರ ನಿರ್ಮಾಣಗೊಂಡು ಒಂದು ವರ್ಷ ಪೂರೈಸಿದ ಹಿನ್ನಲೆಯಲ್ಲಿ ಗೋ ಸೇವಾ ಗತಿವಿಧಿ ಕರ್ನಾಟಕ ಮತ್ತು ರಾಧ ಸುರಭಿ ಗೋ ಮಂದಿರ,ರಾಷ್ಟ್ರೀಯ ಗೋಸೇವಾ ಸಂಸ್ಥಾನ ವತಿಯಿಂದ ರಾಜ್ಯಾದ್ಯಂತ ಸಂಚಾರಿಸುತ್ತಿರುವ ನಂದಿ ರಥಯಾತ್ರೆ ಮಾರ್ಚ್ 15 ರಂದು ಸುಳ್ಯಕ್ಕೆ ಆಗಮಿಸಲಿದೆ. ಈ ಹಿನ್ನೆಲೆಯಲ್ಲಿ ಸುಳ್ಯದ
ಶ್ರೀ ದುರ್ಗಾ ಪರಮೇಶ್ವರಿ ಕಲಾ ಮಂದಿರದಲ್ಲಿ ಮಾ.5 ರಂದು ಪೂರ್ವಭಾವಿ ಸಭೆ ನಡೆಯಿತು. ಆರ್ಎಸ್ಎಸ್ ತಾಲೂಕು ಸಂಘಚಾಲಕ್ ಚಂದ್ರಶೇಖರ ತಳೂರು, ಆರ್ಎಸ್ಎಸ್ ಪ್ರಾಂತ ಸಹ ಸೇವಾ ಪ್ರಮುಖ್ ನ.ಸೀತಾರಾಮ್,ವಿಭಾಗ ಸಹ ಕಾರ್ಯವಾಹ ಸುಭಾಶ್ಚಂದ್ರ ಕಳಂಜ ರಥ ಯಾತ್ರೆಯ ಬಗ್ಗೆ ಮಾಹಿತಿ ನೀಡಿದರು. ಈ ವೇಳೆ ರಥಯಾತ್ರೆ ಸ್ವಾಗತ ಸಮಿತಿ ರಚಿಸಲಾಯಿತು. ಅಧ್ಯಕ್ಷರಾಗಿ ಅಕ್ಷಯ್ ಕೆ.ಸಿ ಮತ್ತು ಕಾರ್ಯಾಧ್ಯಕ್ಷರಾಗಿ ಪತಂಜಲಿ ಭಾರದ್ವಾಜ ಅವರನ್ನು ಆಯ್ಕೆ ಮಾಡಲಾಯಿತು.

ಗೌರವ ಸಲಹೆಗಾರರಾಗಿ ಶಾಸಕಿ ಭಾಗೀರಥಿ ಮುರುಳ್ಯ, ಮಾಜಿ ಸಚಿವ ಎಸ್ ಅಂಗಾರ, ಡಾ. ಕೇಶವ ಸುಳ್ಳಿ, ಸುಧಾಕರ ಕಾಮತ್, ಡಾ. ಪುನೀತ್ ಸೋಣಂಗೇರಿ, ಡಾ.ನಿತಿನ್ ಪ್ರಭು,ಡಾ.ಸೂರ್ಯನಾರಾಯಣ ಬೆಳ್ಳಾರೆ, ಡಾ. ಮೇಘಶ್ರೀ ಕಳಂಜ,ಪ್ರಧಾನ ಕಾರ್ಯದರ್ಶಿಯಾಗಿ ಜಗದೀಶ್ ಸುಳ್ಯ ಮತ್ತು ವಿಕ್ರಂ ಅಡ್ಪಂಗಾಯ, ಕೋಶಾಧಿಕಾರಿ ಯಾಗಿ ಸನತ್ ಪಿ.ಆರ್ ಮತ್ತು ಸಮಿತಿಯ ಗೌರವ ಸದಸ್ಯರನ್ನು ಘೋಷಿಸಲಾಯಿತು. ಪೂರ್ವಭಾವಿ ಸಭೆಯಲ್ಲಿ ಮಾಜಿ ಸಚಿವ ಎಸ್ ಅಂಗಾರ, ನಗರ ಪಂಚಾಯತ್ ಅಧ್ಯಕ್ಷೆ ಶಶಿಕಲಾ ನೀರಬಿದಿರೆ, ಕ್ಯಾಂಪ್ಕೋ ನಿರ್ದೇಶಕ ಕೃಷ್ಣಪ್ರಸಾದ್ ಮಡ್ತಿಲ, ಬಿಜೆಪಿ ಪ್ರಮುಖರಾದ ಹರೀಶ್ ಕಂಜಿಪಿಲಿ,ಉದ್ಯಮಿ ಸುಧಾಕರ ಕಾಮತ್,ಬೆಳ್ಳಾರೆ ಪ್ರಾಥಮಿಕ ಕೃಷಿ ಪತ್ತಿನ ಅಧ್ಯಕ್ಷ ಆರ್.ಕೆ ಭಟ್ ಕುರುಂಬುಡೇಲು, ಸುಳ್ಯ ಸಿಎ ಬ್ಯಾಂಕ್ ಅಧ್ಯಕ್ಷ ವಿಕ್ರಮ್ ಅಡ್ಪಂಗಾಯ,ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಶ್ರೀಕಾಂತ್ ಮಾವಿನಕಟ್ಟೆ, ಬಿಜೆಪಿ ನಗರ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಕುಸುಮಾಧರ ಎ.ಟಿ, ಹೇಮಂತ್ ಕಂದಡ್ಕ, ಜಯಪ್ರಕಾಶ್ ಮೊಗ್ರ, ಹೇಮಂತ್ ಮಠ, ಶಿವಪ್ರಸಾದ್ ಉಗ್ರಾಣಿ ಮನೆ, ಕಿಶನ್ ಜಬಳೆ,ರಜತ್ ಅಡ್ಕಾರು, ಜಗದೀಶ್ ಡಿ.ಪಿ ಮತ್ತು ಸಂಘಟನೆ ಯ ಕಾರ್ಯಕರ್ತರು ಸಭೆಯಲ್ಲಿ ಉಪಸ್ಥಿತರಿದ್ದರು.ನಂದಿ ರಥಯಾತ್ರೆ ತಾಲೂಕು ಸಂಚಾಲಕ ಅವಿನಾಶ್ ಕುರುಂಜಿ ಮತ್ತು ಸಹ ಸಂಚಾಲಕ ರಾಜೇಶ್ ಶೆಟ್ಟಿ ಮೇನಾಲ ಪೂರ್ವಭಾವಿ ಸಭೆ ಸಂಯೋಜಿಸಿದ್ದರು.