ಸುಳ್ಯ :ಮೊಗರ್ಪಣೆ ಅಸ್ಸಯ್ಯಿದ್ ಮಾಂಬ್ಳಿ ವಲಿಯವರ ಹೆಸರಿನಲ್ಲಿ ಪ್ರತಿ ಎರಡು ವರ್ಷಕ್ಕೊಮ್ಮೆ ಆಚರಿಸುತ್ತಿರುವ ಉರೂಸ್ ಸಮಾರಂಭ ಜ 12 ರಂದು ದರ್ಗಾ ಝಿಯಾರತ್ ಮತ್ತು ಮಖಾಂ ಅಲಂಕಾರದೊಂದಿಗೆ ಆರಂಭವಾಯಿತು.ಸ್ಥಳೀಯ ಮಸೀದಿ ಮುದರ್ರಿಸ್ ಹಾಫಿಲ್ ಶೌಖತ್ ಅಲಿ ಸಖಾಫಿ ಯವರು ದುವಾ ನೆರವೇರಿಸಿ ಸ್ಥಳೀಯ ಎಚ್ ಐ ಜೆ ಕಮಿಟಿ ಅಧ್ಯಕ್ಷ ಹಾಜಿ ಇಬ್ರಾಹಿಂ ಸೀ ಫುಡ್ ರವರು ಮಖಾಂ ಗೆ ಚಾದರ್ ಹೊದಿಸಿ ಉರೂಸ್ ಸಮಾರಂಭವನ್ನು ಆರಂಭಿಸಿದರು. ಬಳಿಕ
ಸಾಮೂಹಿಕ ಪ್ರಾರ್ಥನೆ ನಡೆದು ಅಧ್ಯಕ್ಷ ಇಬ್ರಾಹಿಂ ಹಾಜಿರವರು ದ್ವಜಾರೋಹಣ ನಡೆಸಿ ಸಮಾರಂಭಕ್ಕೆ ಚಾಲನೆ ನೀಡಿದರು.
ಈ ಸಂಧರ್ಭದಲ್ಲಿ ಕಾರ್ಯಕ್ರಮದ ಪ್ರಚಾರ ವಾಹನಕ್ಕೆ ಉರೂಸ್ ಸಮಿತಿ ಕಂನ್ವಿನರ್ ಹಾಜಿ ಅಬ್ದುಲ್ ರಜ್ಜಾಕ್ ಶೀತಲ್ ಚಾಲನೆ ನೀಡಿದರು.
ಕಾರ್ಯಕ್ರಮದಲ್ಲಿ

ಜಮಾಅತ್ ಕಮಿಟಿ ಪ್ರಧಾನ ಕಾರ್ಯದರ್ಶಿ ಎಸ್ ಯು ಇಬ್ರಾಹಿಂ, ಉಪಾಧ್ಯಕ್ಷ ಸಿ ಎಂ ಉಸ್ಮಾನ್, ಕೋಶಾಧಿಕಾರಿ ಮಹಮ್ಮದ್ ಆದರ್ಶ, ಎಸ್.ಸಂಶುದ್ದೀನ್, ಕಾರ್ಯದರ್ಶಿ ಎಸ್ ವೈ ಅಬ್ದುಲ್ ರಹಿಮಾನ್, ಉರೂಸ್ ಸಮಿತಿ ವೈಸ್ ಕಂನ್ವಿನರ್ ಗಳಾದ ಹನೀಫ್ ಪೋಸೂಟ್, ಕೆ ಯು ರಶೀದ್, ಹಿರಿಯರಾದ ಹಾಜಿ ಅಬೂಬಕ್ಕರ್ ಬಿ ಎಂ ಎ, ಡಿ. ಇಬ್ರಾಹಿಂ, ಹಾಜಿ ಪಳ್ಳಿ ಕುಂಞಿ, ಜಮಾಅತ್ ಕಮಿಟಿ ಸದಸ್ಯರುಗಳು,ಉರೂಸ್ ಸ್ವಾಗತ ಸಮಿತಿ ಪದಾಧಿಕಾರಿಗಳು, ಸದಸ್ಯರು, ಮದ್ರಸ ಅಧ್ಯಾಪಕವೃಂದ, ಸ್ಥಳೀಯ ಸಂಘಟನೆಗಳ ಅಧ್ಯಕ್ಷರು ಸದಸ್ಯರುಗಳು, ಜಮಾಅತ್ ಸದಸ್ಯರುಗಳು ಉಪಸ್ಥಿತರಿದ್ದರು.
ನೂರುಲ್ ಇಸ್ಲಾಂ ಹೈಯರ್ ಸೆಕಂಡರಿ ಮದ್ರಸ ಸದರ್ ಮುಅಲ್ಲಿಮ್ ಅಬ್ದುಲ್ ಕರೀಂ ಸಖಾಫಿ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.
ಉರೂಸ್ ಅಂಗವಾಗಿ ಜ 12 ರಿಂದ 15 ರ ವರೆಗೆ ಖ್ಯಾತ ವಾಗ್ಮಿಗಳಿಂದ ಧಾರ್ಮಿಕ ಪ್ರಭಾಷಣ ಹಾಗೂ ಸಯ್ಯಿದ್ ಕುಟುಂಬದವರಿಂದ ದುವಾ ಮಜ್ಲೀಸ್ ನಡೆಯಲಿದೆ.