ಸುಳ್ಯ:ಹಝ್ರತ್ ವಲಿಯುಲ್ಲಾಹಿ ಮಾಂಬಳಿ ತಂಙಳ್ ಅವರ ಹೆಸರಿನಲ್ಲಿ 2 ವರ್ಷಕ್ಕೊಮ್ಮೆ ಆಚರಿಸಿಕೊಂಡು ಬರುತ್ತಿರುವ ಮೊಗರ್ಪಣೆ ಮಖಾಂ ಉರೂಸ್ಗೆ ಜ.12ರಂದು ಚಾಲನೆ ದೊರೆತಿದೆ. ಈ ಪ್ರಯುಕ್ತ ರಾತ್ರಿ ನಡೆದ ಸಭಾ ಕಾರ್ಯಕ್ರಮವನ್ನು ಮೊಗರ್ಪಣೆ ಎಂಜೆಎಂ ಖತೀಬರಾದ ಹಾಫಿಳ್ ಶೌಖತ್ ಅಲಿ ಸಖಾಫಿ ಉದ್ಘಾಟಿಸಿದರು.ಉರೂಸ್ ಸ್ವಾಗತ ಸಮಿತಿ ಅಧ್ಯಕ್ಷರು ಹಾಗೂ ಜಮಾಯತ್ ಕಮಿಟಿಯ
ಅಧ್ಯಕ್ಷರಾದ ಜಿ. ಇಬ್ರಾಹಿಂ ಹಾಜಿ ಅವರು ಅಧ್ಯಕ್ಷತೆ ವಹಿಸಿದ್ದರು. ಖ್ಯಾತ ವಾಗ್ಮಿ ಸಿರಾಜುದ್ದೀನ್ ಖಾಸಿಮಿ ಉರೂಸ್ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಸಯ್ಯದ್ ಝೈನುಲ್ ಆಬಿದಿನ್ ತಂಙಳ್, ಉರೂಸ್ ಸ್ವಾಗತ ಸಮಿತಿ ಕನ್ವೀನರ್ ಅಬ್ದುಲ್ ರಝಖ್ ಹಾಜಿ ಶೀತಲ್, ಉದ್ಯಮಿ ಅಬ್ದುಲ್ ರಹಿಮಾನ್ ಸಂಕೇಶ್, ಹೆಚ್ಐಜೆ ಕಮಿಟಿ ಮಾಜಿ ಅಧ್ಯಕ್ಷ ಎಸ್.ಸಂಶುದ್ದೀನ್, ಹೆಚ್ಐಜೆ ಕಮಿಟಿ ಉಪಾಧ್ಯಕ್ಷ ಪಿ.ಎಂ.ಉಸ್ಮಾನ್, ಬಿಜೆಎಂ ಪೈಚಾರ್ ಅಧ್ಯಕ್ಷ ಹಾಜಿ ಇಬ್ರಾಹಿಂ ಪಿ, ಹೆಚ್ಐಜೆ ಕಮಿಟಿ ಪ್ರಧಾನ ಕಾರ್ಯದರ್ಶಿ ಎಸ್.ಯು.ಇಬ್ರಾಹಿಂ,

ನಿರ್ದೇಶಕರಾದ ಸಮದ್ ಹಾಜಿ, ಉಮ್ಮರ್ ಹಾಜಿ ಎಚ್.ಎ, ಅಬ್ದುಲ್ ರಝಾಕ್ ಜಿ.ಕೆ, ಅಬ್ದುಲ್ ಖಾದರ್, ಮದ್ರಸ ಅಧ್ಯಾಪಕರುಗಳು ಮತ್ತಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸದರ್ ಮುಅಲ್ಲಿಂ ಅಬ್ದುಲ್ ಕರೀಂ ಸಖಾಫಿ ಸ್ವಾಗತಿಸಿ, ಮುಅಲ್ಲೀಂ ಹಂಝ ಸಖಾಫಿ ವಂದಿಸಿದರು.
ಕಾರ್ಯಕ್ರಮದ ಅಂಗವಾಗಿ ನಬೀಲ್ ಬರ್ಕಾತ್ ಬೆಂಗಳೂರು ಮತ್ತು ಬಳಗದವರಿಂದ
‘ನಅತೇ ಶರೀಫ್’ ಉರ್ದು ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.