ಸುಳ್ಯ: ಸುಳ್ಯದ ಕಲ್ಕುಡ ದೈವಸ್ಥಾನದ ಪುನರ್ ಪ್ರತಿಷ್ಠಾ ಕಲಶೋತ್ಸವ ಕಾರ್ಯಕ್ರಮಕ್ಕೆ ಉದ್ಯಮಿ ನಂದಕುಮಾರ್ ಹೆಚ್.ಎಂ. ಭೇಟಿ ನೀಡಿದರು. ದೈವಸ್ಥಾನದ ಜೀರ್ಣೋದ್ದಾರ ಸಮಿತಿಯ ಅಧ್ಯಕ್ಷ ಕೃಷ್ಣ ಕಾಮತ್, ಆಡಳಿತ ಧರ್ಮದರ್ಶಿ ಪಿ.ಕೆ.ಉಮೇಶ್ ಸ್ವಾಗತಿಸಿದರು. ಈ ಸಂದರ್ಭದಲ್ಲಿ
ವೇದ ಮೂರ್ತಿ ಗಣೇಶ ತಂತ್ರಿ ದೇಲಂಪಾಡಿ, ಧರ್ಮದರ್ಶಿಗಳು, ಜೀರ್ಣೋದ್ಧಾರ ಸಮಿತಿ ಪದಾಧಿಕಾರಿಗಳು, ಪ್ರಮುಖರಾದ
ಭವಾನಿಶಂಕರ್ ಕಲ್ಮಡ್ಕ, ಶಶಿಧರ ಎಂ ಜೆ, ಚೇತನ್ ಕಜೆಗದ್ದೆ, ಗೋಕುಲ್ ದಾಸ್, ಜಯಪ್ರಕಾಶ್ ನೆಕ್ರಪ್ಪಾಡಿ, ರಾಧಾಕೃಷ್ಣ ಪರಿವಾರಕಾನ, ಮಧುಸೂದನ್ ಬೂಡು, ಪಪ್ಪು ಮಡಿಕೇರಿ, ಕುಶಾಲಪ್ಪ ಬೂಡು, ದಿನೇಶ್ ದರ್ಖಾಸ್ತು, ಪದ್ಮನಾಭ ಹರ್ಲಡ್ಕ, ಮತ್ತಿತರರು ಇದ್ದರು.








