ಬೆಂಗಳೂರು: ವಿಧಾನ ಸಭೆಯಿಂದ ವಿಧಾನಪರಿಷತ್ಗೆ ನಡೆದ ದ್ವೈವಾರ್ಷಿಕ ಚುನಾವಣೆಯಲ್ಲಿ ಮೂರು ರಾಜಕೀಯ ಪಕ್ಷಗಳ 11 ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆ ಆಗಿದ್ದಾರೆ.ಈ ಸಂಬಂಧ ಚುನಾವಣಾಧಿಕಾರಿ
ಎಂ.ಕೆ.ವಿಶಾಲಾಕ್ಷಿ ಅವರು ಪ್ರಕಟಣೆ ಹೊರಡಿಸಿದ್ದಾರೆ. ಕಾಂಗ್ರೆಸ್ನ 7, ಬಿಜೆಪಿಯ 2 ಹಾಗೂ ಜೆಡಿಎಸ್ನ ಒಬ್ಬರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಕಾಂಗ್ರೆಸ್ನ ಎನ್.ಎಸ್.ಬೋಸರಾಜು, ಐವನ್ ಡಿಸೋಜ, ಕೆ.ಗೋವಿಂದರಾಜ್, ಜಗದೇವ ಗುತ್ತೇದಾರ್, ಡಾ.ಯತೀಂದ್ರ, ಎ.ವಸಂತಕುಮಾರ್, ಬಿಲ್ಕಿಸ್ ಭಾನು, ಬಿಜೆಪಿಯ ಸಿ.ಟಿ.ರವಿ, ಎನ್.ರವಿಕುಮಾರ್ ಮತ್ತು ಎಂ.ಜಿ.ಮುಳೆ, ಜೆಡಿಎಸ್ನಿಂದ ಟಿ.ಎನ್.ಜವರಾಯಿಗೌಡ ಅವರು ಆಯ್ಕೆ ಆಗಿರುವ ಅಭ್ಯರ್ಥಿಗಳು.