ಸುಳ್ಯ:ಸೋಣಂಗೇರಿ ಶ್ರೀಕೃಷ್ಣ ಭಜನಾ ಮಂದಿರದ ಜೀರ್ಣೋದ್ಧಾರ ಕಾರ್ಯಕ್ಕಾಗಿ ರಾಜ್ಯ ಒಕ್ಕಲಿಗರ ಸಂಘದ ಉಪಾಧ್ಯಕ್ಷ ಹಾಗೂ ಎ.ಒ.ಎಲ್.ಇ.ಕಮಿಟಿ ಬಿ ಅಧ್ಯಕ್ಷರಾದ ಡಾ. ರೇಣುಕಾ ಪ್ರಸಾದ್ ಕೆ.ವಿ.ಅವರು ಧನಸಹಾಯ ನೀಡಿದ್ದಾರೆ. ಅವರು ನೀಡಿದ
ಧನಸಹಾಯದ ಚೆಕ್ನ್ನು ಆಡಳಿತಾಧಿಕಾರಿ ಭವಾನಿಶಂಕರ ಅಡ್ತಲೆ ಭಜನಾ ಮಂದಿರದ ಅಧ್ಯಕ್ಷ ಗಿರಿಧರ ಗೌಡರಿಗೆ ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ಎ. ಒ. ಎಲ್. ಇ. ಬಿ ಕಮಿಟಿಯ ಉದ್ಯೋಗಿಗಳಾದ ಪ್ರಸನ್ನ ಕಲ್ಲಾಜೆ, ಪದ್ಮನಾಭ ಕಾನಾವುಜಾಲು, ಪ್ರಮುಖರಾದ ಸುಪ್ರೀತ್ ಮೋಂಟಡ್ಕ, ಸತ್ಯಶಾಂತಿ ತ್ಯಾಗಮೂರ್ತಿ ಉಪಸ್ಥಿತರಿದ್ದರು.












