ಸುಳ್ಯ: ಸುನ್ನೀ ಯುವ ಜನ ಸಂಘ (ಎಸ್.ವೈ.ಎಸ್) ರಾಜ್ಯ ಸಮಿತಿಯು ವತಿಯಿಂದ ನಡೆದ ಶತ ದಿನಗಳ ‘ಮಾದರಿ ಮದುವೆ’ ಅಭಿಯಾನದ ಸಮರೋಪ ಸಮಾರಂಭ ಮೇ.2ರಂದು ಪುತ್ತೂರು ಕಿಲ್ಲೆ ಮೈದಾನದಲ್ಲಿ ನಡೆಯಲಿದೆ ಎಂದು ಕೆ.ಎಂ.ಜೆ ರಾಜ್ಯ ಸಮಿತಿ ಸದಸ್ಯ ಕೆ.ಎಂ.ಅಬ್ದುಲ್ ಹಮೀದ್ ಸುಣ್ಣಮೂಲೆ ಹೇಳಿದರು.ಸುಳ್ಯದಲ್ಲಿ ಎಸ್.ವೈ.ಎಸ್ ಸುಳ್ಯ ಝೋನ್ ವತಿಯಿಂದ ನಡೆದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿ ಅಭಿಯಾನ ಸಮಾರೋಪ ಸಂಜೆ ನಡೆಯಲಿದ್ದು, 4 ಗಂಟೆಗೆ ಪುತ್ತೂರಿನ
ದರ್ಬೆಯಿಂದ ಕಿಲ್ಲೆ ಮೈದಾನ ವರೆಗೆ ಕಾಲ್ನಡಿಗೆ ಜಾಥ ನಡೆಯಲಿದೆ. ಸಂಜೆ 5.30ಕ್ಕೆ ಸಮಾರೋಪ ಸಮ್ಮೇಳನ ನಡೆಯಲಿದೆ. ಇಂಡಿಯನ್ ಗ್ರ್ಯಾಂಡ್ ಮುಫ್ತಿ ಸುಲ್ತಾನುಲ್ ಎ.ಪಿ ಅಬೂಬಕ್ಕರ್ ಮುಸ್ಲಿಯಾರ್ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದು, ಕರ್ನಾಟಕ ಜಂಇಯ್ಯತುಲ್ ಉಲಮಾ ರಾಜ್ಯಾಧ್ಯಕ್ಷ ಝೈನುಲ್ ಉಲಮಾ ಅಬ್ದುಲ್ ಹಮೀದ್ ಮುಸ್ಲಿಯಾರ್, ‘ಸಮಸ್ತ’ ಕಾರ್ಯದರ್ಶಿ ಪೇರೋಡ್ ಅಬ್ದುರ್ರಹ್ಮಾನ್ ಸಖಾಫಿ ಮುಖ್ಯ ಪ್ರಭಾಷಣ ಮಾಡಲಿದ್ದಾರೆ. ಸಮಸ್ತ ಉಲಮಾ ಒಕ್ಕೂಟದ ಕಾರ್ಯದರ್ಶಿ ಪೇರೊಡ್ ಅಬ್ದುಲ್ ರಹಿಮಾನ್ ಸಖಾಫಿ ದಿಕ್ಸೂಚಿ ಬಾಷಣ ಮಾಡಲಿದ್ದಾರೆ. ಕರ್ನಾಟಕ ವಿಧಾನ ಸಭಾ ಸ್ಪೀಕರ್ ಯು ಟಿ ಖಾದರ್, ಪುತ್ತೂರು ಶಾಸಕ ಅಶೋಕ್ ರೈ ಸೇರಿದಂತೆ ಅನೇಕ ಧಾರ್ಮಿಕ ಮತ್ತು ಸಾಮಾಜಿಕ ನಾಯಕರುಗಳು ಭಾಗವಹಿಸಲಿದ್ದಾರೆ ಎಂದರು.
ಸುದ್ದಿಗೋಷ್ಠಿಯಲ್ಲಿ ಎಸ್.ವೈ.ಎಸ್ ಸುಳ್ಯ ಝೋನ್ ಅಧ್ಯಕ್ಷ ಅಬ್ದುಲ್ ಲತೀಫ್ ಸಖಾಫಿ ಗೂನಡ್ಕ, ಎಸ್ ಎಂ ಎ ಜಿಲ್ಲಾ ಕೋಶಾಧಿಕಾರಿ ಅಬ್ದುಲ್ ಲತೀಫ್ ಹರ್ಲಡ್ಕ, ಕೆ.ಎಂ.ಜೆ ಸದಸ್ಯ ಸಿದ್ದೀಕ್ ಕಟ್ಟೆಕ್ಕಾರ್, ಎಸ್ವೈಎಸ್ ಕಾರ್ಯದರ್ಶಿ ಸಿದ್ದೀಕ್ ಗೂನಡ್ಕ, ಎಸ್.ವೈ.ಎಸ್ ಸಾಮಾಜಿಕ ವಿಭಾಗದ ಕಾರ್ಯದರ್ಶಿ ಅಬ್ದುಲ್ ಲತೀಫ್ ಅಡ್ಕಾರ್, ಎಸ್.ವೈ.ಎಸ್ ಸದಸ್ಯ ಸಿರಾಜ್ ಸಹದಿ ಅಲೆಕ್ಕಾಡಿ, ಎಸ್.ಎಸ್.ಎಫ್ ಪ್ರದಾನ ಕಾರ್ಯದರ್ಶಿ ಸಮೀರ್ ಡಿ.ಎಚ್. ಉಪಸ್ಥಿತರಿದ್ದರು












