ಅಹಮದಾಬಾದ್: ತಿಲಕ್ ವರ್ಮಾ ಅವರ ಚೊಚ್ಚಲ ಶತಕದ ನೆರವಿನಿಂದ, ಇಂಡಿಯನ್ ಪ್ರೀಮಿಯರ್ ಲೀಗ್ ಪಂದ್ಯದಲ್ಲಿ ಗುಜರಾತ್ ಟೈಟನ್ಸ್ ವಿರುದ್ಧ ಮುಂಬೈ ಇಂಡಿಯನ್ಸ್ ತಂಡವು 99 ರನ್ಗಳ ಭರ್ಜರಿ ಗೆಲುವು ಸಾಧಿಸಿದೆ.ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ
ಮುಂಬೈ ಇಂಡಿಯನ್ಸ್ ತಂಡವು 20 ಓವರ್ಗಳ ಅಂತ್ಯಕ್ಕೆ 5 ವಿಕೆಟ್ ನಷ್ಟಕ್ಕೆ 199 ರನ್ ಗಳಿಸಿತು. ತಿಲಕ್ ವರ್ಮಾ ಕೇವಲ 45 ಎಸೆತಗಳಲ್ಲಿ 8 ಬೌಂಡರಿ, 7 ಸಿಕ್ಸರ್ ಸಹಿತ ಅಜೇಯ 101 ರನ್ ಗಳಿಸಿದರು. ನಮನ್ ಧೀರ್ (45 ರನ್; 32 ಎಸೆತ) ಉಪಯುಕ್ತ ಆಟವಾಡಿದರು.
200 ರನ್ಗಳ ಬೃಹತ್ ಗುರಿ ಬೆನ್ನತ್ತಿದ ಗುಜರಾತ್ ಬ್ಯಾಟರ್ಗಳು, ಮುಂಬೈ ಬೌಲರ್ಗಳ ಬಿಗಿ ದಾಳಿ ಎದುರು ರನ್ ಗಳಿಸಲು ಪರದಾಡಿದರು. 15.5 ಓವರ್ಗಳಲ್ಲಿ 100 ರನ್ಗಳಿಗೆ ಆಲೌಟ್ ಆದರು. ವಾಷಿಂಗ್ಟನ್ ಸುಂದರ್ ಅವರ 26 ರನ್ಗಳೇ ಟೈಟನ್ಸ್ ಪರ ಅಧಿಕ ಮೊತ್ತವಾಗಿದೆ.ಮುಂಬೈ ಪರ ಅಶ್ವಿನಿ ಕುಮಾರ್ 4 ವಿಕೆಟ್ ಪಡೆದು ಮಿಂಚಿದರು.


















