ಸುಳ್ಯ:ಮಳೆಗಾಲ ಆರಂಭಕ್ಕೆ ಮುನ್ನುಡಿ ಎಂಬಂತೆ ಸುಳ್ಯದಲ್ಲಿ ಉತ್ತಮ ಮಳೆಯಾಗಿದೆ. ಬೆಳಿಗ್ಗಿನಿಂದ ಮೋಡ ಕವಿದ ವಾತಾವರಣ ಇತ್ತು. ಮಧ್ಯಾಹ್ನದ ಬಳಿಕ ಉತ್ತಮ ಮಳೆ ಸುರಿದಿದೆ. ಹನಿ ಮಳೆಯೊಂದಿಗೆ ಆರಂಭಗೊಂಡು ವಿವಿಧ ಭಾಗಗಳಲ್ಲಿ ಉತ್ತಮ ಮಳೆಯಾಗಿದೆ. ಮಳೆಗಾಲ ಆರಂಭದ
ಲಕ್ಷಣದೊಂದಿಗೆ ನಿರಂತರ ಮಳೆಯಾಗಿದೆ.ಈ ಮಧ್ಯೆ ಜೂ.4ರಂದು ನೈರುತ್ಯ ಮುಂಗಾರು ಕೇರಳಕ್ಕೆ ಪ್ರವೇಶ ಪಡೆಯಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಸೂಚನೆ ನೀಡಿದೆ. ಬಳಿಕ ಒಂದೆರಡು ದಿನದಲ್ಲಿ ಮುಂಗಾರು ಕರ್ನಾಟಕ ಪ್ರವೇಶಿಸಲಿದೆ. ದಕ್ಷಿಣ ಅರೇಬಿಯನ್ ಸಮುದ್ರದಲ್ಲಿ ಮುಂಗಾರು ಮಾರುತಗಳ ವೇಗ ಹೆಚ್ಚಾಗಿದ್ದು, ಜೂನ್ 4ರ ವೇಳೆಗೆ ಕೇರಳದ ಭೂಭಾಗವನ್ನು ಮುಟ್ಟಲಿವೆ ಎಂದು ಇಲಾಖೆ ಖಚಿತಪಡಿಸಿದೆ. ಇದರ ಪ್ರಭಾವದಿಂದಾಗಿ
ಈಗಾಗಲೇ ಕೇರಳದ ದಕ್ಷಿಣ ಮತ್ತು ಮಧ್ಯ ಭಾಗಗಳಲ್ಲಿ ಮುಂಗಾರು ಪೂರ್ವ ಮಳೆ ತೀವ್ರಗೊಂಡಿದೆ. ಮುಂದಿನ 48 ಗಂಟೆಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆಯಿದೆ ಎಂದು ಹೇಳಿದೆ.ಈ ವರ್ಷ ‘ಎಲ್ ನಿನೋ’ ಪ್ರಭಾವ ಇರುವುದರಿಂದ ದೇಶಾದ್ಯಂತ ಒಟ್ಟಾರೆ ಮುಂಗಾರು ಮಳೆಯ ಪ್ರಮಾಣ ಸಾಮಾನ್ಯಕ್ಕಿಂತ ಸ್ವಲ್ಪ ಕಡಿಮೆ ಇರಬಹುದು ಎಂದು ಅಂದಾಜಿಸಲಾಗಿದೆ.














