ನವದೆಹಲಿ: ಈ ವರ್ಷದ ಕೊನೆಯ ಚಂದ್ರ ಗ್ರಹಣ ದೇಶದ ವಿವಿಧ ಭಾಗಗಳಲ್ಲಿ ಗೋಚರಿಸಿದೆ. ಕೆಲವು ದಿನಗಳ ಹಿಂದೆ ಸೂರ್ಯ ಗ್ರಹಣ ಸಂಭವಿಸಿದ್ದು 15 ದಿನದಲ್ಲಿ ಸಂಭವಿಸುತ್ತಿರುವ 2ನೇ ಗ್ರಹಣವಾಗಿದೆ. ಇಂದು ಚಂದ್ರಗ್ರಹಣವು ಮಧ್ಯಾಹ್ನ 2.39ಕ್ಕೆ ಆರಂಭವಾಗಿ, ಸಂಜೆ 6.19ಕ್ಕೆ ಮುಕ್ತಾಯವಾಗಿದೆ. ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಚಂದ್ರಗ್ರಹಣ
ಗೋಚರವಾಗಿದೆ. ಕಲಬುರಗಿ, ಕೊಪ್ಪಳ, ಬೀದರ್, ಗದಗ ಸೇರಿದಂತೆ ರಾಜ್ಯದ ಹಲವು ಕಡೆಗಳಲ್ಲಿ ಚಂದ್ರ ಗ್ರಹಣ ಗೋಚರವಾಗಿದೆ.
ಮಧ್ಯಾಹ್ನದ ವೇಳೆ ಚಂದ್ರಗ್ರಹಣ ಸಂಭವಿಸಿದ್ದರೂ ಕಾಣಲಿಲ್ಲ. ಆದರೆ, ಸಂಜೆ ಸೂರ್ಯಾಸ್ತದ ನಂತರ ಹಲವು ಕಡೆಗಳಲ್ಲಿ ಗ್ರಹಣ ಗೋಚರವಾಗಿದೆ. ಎರಡು ವಾರಗಳ ಹಿಂದೆಯಷ್ಟೇ ಅಮಾವಾಸ್ಯೆಯಂದು ಭಾಗಶಃ ಸೂರ್ಯಗ್ರಹಣ ಸಂಭವಿಸಿತ್ತು. ಇಂದು ಚಂದ್ರಗ್ರಹಣದ ಹಿನ್ನೆಲೆಯಲ್ಲಿ ವಿವಿಧ ದೇವಾಲಯಗಳಲ್ಲಿ ಬಂದ್ ಮಾಡಲಾಯಿತು. ಕೆಲವು ಕಡೆ ಭಕ್ತರಿಗೆ ಪ್ರವೇಶ ನೀಡಲಾಗಿದ್ದರೂ ಸೇವೆಗಳು ಇರಲಿಲ್ಲ.