ಸುಳ್ಯ:ಸುಳ್ಯ ಲಯನ್ಸ್ ಕ್ಲಬ್, ಲಯನ್ಸ್ ಪ್ರಾಂತ 5ರ ವತಿಯಿಂದ ಲಯನ್ಸ್ ಪ್ರಾಂತೀಯ ಸಮ್ಮೇಳನ ‘ವರ್ಣ’ ಫೆ.22ರಂದು ಸುಳ್ಯದ ಬಂಟರ ಭವನದಲ್ಲಿ ನಡೆಯಲಿದೆ ಎಂದು ಪ್ರಾಂತೀಯ ಸಮ್ಮೇಳನ ಸಂಘಟನಾ ಸಮಿತಿಯ ಅಧ್ಯಕ್ಷ ಎನ್.ಜಯಪ್ರಕಾಶ್ ರೈ ಹಾಗೂ ಲಯನ್ಸ್ ಪ್ರಾಂತೀಯ ಅಧ್ಯಕ್ಷ ಗಂಗಾಧರ ರೈ ಎಸ್. ತಿಳಿಸಿದ್ದಾರೆ. ಸುಳ್ಯ ಪ್ರೆಸ್ ಕ್ಲಬ್ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ
ಅವರು ಮಾಹಿತಿ ನೀಡಿದರು. ಫೆ.22ರಂದು 4 ಗಂಟೆಯಿಂದ 10 ಗಂಟೆಯ ತನಕ ನಡೆಯುವ ಸಮ್ಮೇಳನದಲ್ಲಿ ಪ್ರಾಂತ್ಯದಲ್ಲಿರುವ 7 ಲಯನ್ಸ್ ಕ್ಲಬ್ಗಳ ಸದಸ್ಯರು ಹಾಗೂ ಕುಟುಂಬ ವರ್ಗದವರು ಸೇರಿ 300ರಿಂದ 400 ಮಂದಿ ಭಾಗವಹಿಸಲಿದ್ದಾರೆ. 4 ಗಂಟೆಯಿಂದ ನೋಂದಾವಣೆ, ರಿಪ್ರೆಶ್ಮೆಂಟ್, ಫನ್ ಗೇಮ್ಸ್ ನಡೆಯಲಿದೆ. 5.30ಕ್ಕೆ ಎಲ್ಲಾ ಕ್ಲಬ್ಗಳ ಬ್ಯಾನರ್ ಪ್ರೆಸೆಂಟೇಷನ್ ನಡೆಯಲಿದೆ. 6 ಗಂಟೆಯಿಂದ 8.30ರ ತನಕ ಪ್ರಾಂತೀಯ ಸಮ್ಮೇಳನ ನಡೆಯಲಿದೆ. ಲಯನ್ಸ್ ಪ್ರಾಂತೀಯ ಅಧ್ಯಕ್ಷ ಗಂಗಾಧರ ರೈ ಎಸ್.ಸಮ್ಮೇಳನದ ಅಧ್ಯಕ್ಷತೆ ವಹಿಸುವರು.ಪ್ರಾಂತೀಯ ಅಧ್ಯಕ್ಷರ ಪತ್ನಿ ಪ್ರಾಂತ್ಯದ ಪ್ರಥಮ ಮಹಿಳೆ ವೇದಾವತಿ ಜಿ.ರೈ ಸಮ್ಮೇಳನ ಉದ್ಘಾಟಿಸುವರು.ಲಯನ್ಸ್ ಮಾಜಿ

ಮಲ್ಟಿಪಲ್ ಕೌನ್ಸಿಲ್ ಚೆಯರ್ಮೆನ್ ವಸಂತಕುಮಾರ್ ಶೆಟ್ಟಿ ಮುಖ್ಯ ಅತಿಥಿಯಾಗುವರು. ಮಾಜಿ ಲಯನ್ಸ್ ಜಿಲ್ಲಾ ಗವರ್ನರ್ ಎಂ.ಬಿ.ಸದಾಶಿವ ಅತಿಥಿಯಾಗಿ ಭಾಗವಹಿಸಲಿದ್ದಾರೆ. ನಿವೃತ್ತ ಕ್ಷೇತ್ರ ಶಿಕ್ಷಣಾಧಿಕಾರಿ ರಮೇಶ್ ಬಿ.ಇ. ಮುಖ್ಯ ಭಾಷಣ ಮಾಡುವರು. ಪ್ರಾಂತ್ಯದ 7 ಲಯನ್ಸ್ ಕ್ಲಬ್ ವ್ಯಾಪ್ತಿಯ ಲಯನ್ಸ್ ಸದಸ್ಯರಲ್ಲದ ತಲಾ ಒಬ್ಬೊಬ್ಬರು ಸಾಧಕರನ್ನು ಗುರುತಿಸಿ ಸನ್ಮಾನಿಸಲಾಗುವುದು.
ರಾತ್ರಿ 8.30ರ ಬಳಿಕ ಸಹಭೋಜನ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ ಎಂದು ಅವರು ವಿವರಿಸಿದರು.ಪ್ರಾಂತೀಯ ಸಮ್ಮೇಳನದ ಅಂಗವಾಗಿ ಸೇವಾ ಯೋಜನೆ ಹಮ್ಮಿಕೊಳ್ಳಲಾಗಿದ್ದು ಸೋಣಂಗೇರಿಯಲ್ಲಿ ಬಸ್ ತಂಗುದಾಣ ನಿರ್ಮಿಸಲಾಗುವುದು ಎಂದು ಎನ್.ಜಯಪ್ರಕಾಶ್ ರೈ ಮತ್ತು ಗಂದಾಧರ ರೈ ಅವರು ತಿಳಿಸಿದರು.ಸುದ್ದಿಗೋಷ್ಠಿಯಲ್ಲಿ

ಸುಳ್ಯ ಲಯನ್ಸ್ ಕ್ಲಬ್ ಅಧ್ಯಕ್ಷ ರಾಮಕೃಷ್ಣ ರೈ, ಕಾರ್ಯದರ್ಶಿ ರಾಮಚಂದ್ರ ಪಲ್ಲತ್ತಡ್ಕ, ಖಜಾಂಜಿ ರಮೇಶ್ ಶೆಟ್ಟಿ, ಪ್ರಾಂತೀಯ ಸಮ್ಮೇಳನ ಸಂಘಟನಾ ಸಮಿತಿಯ ಕಾರ್ಯದರ್ಶಿ ದೀಪಕ್ ಕುತ್ತಮೊಟ್ಟೆ, ಖಜಾಂಜಿ ದೊಡ್ಡಣ್ಣ ಬರೆಮೇಲು ಉಪಸ್ಥಿತರಿದ್ದರು.