ಸುಳ್ಯ:ಕೆವಿಜಿ ಅಮರ ಜ್ಯೋತಿ ಪದವಿ ಪೂರ್ವ ಕಾಲೇಜಿನ ದ್ವಿತೀಯ ಪಿಯು ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಸಮಾರಂಭ ಕಾಲೇಜಿನಲ್ಲಿ ನಡೆಯಿತು. ಕಾಲೇಜಿನ ಮುಖ್ಯ ಕಾರ್ಯನಿರ್ವಹಣಾಧಿಕಾರಿ
ಡಾ. ಉಜ್ವಲ್ ಯು ಜೆ ಮುಖ್ಯ ಅತಿಥಿಯಾಗಿ ಭಾಗವಹಿಸಿ ಶುಭ ಹಾರೈಸಿದರು. ಹೆತ್ತವರ, ಅಧ್ಯಾಪಕರ ಆಶಯಕ್ಕೆ ತಕ್ಕಂತೆ ಉನ್ನತ ಶಿಕ್ಷಣ ಪಡೆದು
ಕಲಿತ ಶಿಕ್ಷಣ ಸಂಸ್ಥೆಗಳಿಗೆ ಕೀರ್ತಿ ತನ್ನಿ ಎಂದು ಅವರು ಹೇಳಿದರು. ವಿದ್ಯಾರ್ಥಿ ಜೀನವದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳ ಮಹತ್ವವನ್ನು ಅವರು ವಿವರಿಸಿದರು.
ಪ್ರಾಂಶುಪಾಲರಾದ ಡಾ. ಯಶೋದಾ ರಾಮಚಂದ್ರ ಮಾತನಾಡಿ ಸುಳ್ಯದಂತಹ ಗ್ರಾಮೀಣ ಪ್ರದೇಶದಲ್ಲಿ ಮೌಲ್ಯಯುತವಾದ ಹಾಗೂ ಇಂದಿನ ಸ್ಪರ್ಧಾತ್ಮಕ ಜಗತ್ತಿನ ಅಗತ್ಯಕ್ಕೆ ಅನುಗುಣವಾದ ಪಿಯು ಶಿಕ್ಷಣ ನೀಡಿ ಮಕ್ಕಳಿಗೆ ಉತ್ತಮ ಭವಿಷ್ಯ ನೀಡಲು ಶ್ರಮಿಸುತ್ತಿರುವ ಮ್ಯಾನೇಜಿಂಗ್ ಟ್ರಸ್ಟಿ ಡಾ. ರೇಣುಕಾ ಪ್ರಸಾದ್ ಹಾಗೂ ಟ್ರಸ್ಟಿ ಡಾ. ಜ್ಯೋತಿ ಆರ್ ಪ್ರಸಾದ್,ಅವರನ್ನು ಅಭಿನಂದಿಸಿ ವಿದ್ಯಾರ್ಥಿಗಳು ಸಂಸ್ಕಾರಯುತ ಜೀವನ ಪದ್ಧತಿಯನ್ನು ಅಳವಡಿಸಿಕೊಂಡು ಸಮಾಜದಲ್ಲಿ ಯೋಗ್ಯ ವ್ಯಕ್ತಿಗಳಾಗಿ ಬದುಕುವಂತೆ ಕರೆ ನೀಡಿದರು.

ವಿದ್ಯಾರ್ಥಿಗಳಿಗಾಗಿ ಅಧ್ಯಾಪಕರು ಬೇರೆ ಬೇರೆ ತಂಡಗಳಾಗಿ ಮನೋರಂಜನ ಸ್ಪರ್ಧೆಗಳನ್ನು ನಡೆಸಿಕೊಟ್ಟರು. ವಿದ್ಯಾರ್ಥಿಗಳಾದ ಪ್ರತಿಜ್ಞ, ಖಲಿದ ನುಹಾ, ನಿತಿನ್ ಥಾಮಸ್, ಸಾನಿಕ ರೈ, ಸಂದೇಶ್, ರಿತಿ ಆಳ್ವ, ಶ್ರೇಯಸ್, ಮೊಹಮ್ಮದ್ ಶಬಾಬ್ ಅಮರ ಜ್ಯೋತಿ ಕಾಲೇಜಿನಲ್ಲಿ ತಾವು ಕಳೆದ ಎರಡು ವರ್ಷಗಳ ನೆನಪುಗಳನ್ನು ಹಂಚಿಕೊಂಡರು. ಚಂದನ ಅನುಭವವನ್ನು ಸ್ವರಚಿತ ಕವನದ ಮೂಲಕ ವಾಚಸಿದರು.