ಸುಳ್ಯ:ಕೆ.ವಿ.ಜಿ ಕೈಗಾರಿಕಾ ತರಬೇತಿ ಸಂಸ್ತೆಯಲ್ಲಿ ಸ್ಮಾರ್ಟ್ಕ್ಲಾಸ್ ರೂಂನ್ನು ಅಕಾಡೆಮಿ ಆಪ್ ಲಿಬರಲ್ ಎಜುಕೇಶನ್ ಕಮಿಟಿ ಬಿ ಇದರ ಅಧ್ಯಕ್ಷರು ಮತ್ತು ರಾಜ್ಯ ಒಕ್ಕಲಿಗರ ಸಂಘ ಬೆಂಗಳೂರು ಇದರ ಉಪಾಧ್ಯಕ್ಷರಾದ ಡಾ. ರೇಣುಕಾ ಪ್ರಸಾದ್ ಕೆ.ವಿ ಅವರು ಉದ್ಘಾಟಿಸಿದರು.ಮುಖ್ಯ ಅಥಿತಿಗಳಾಗಿ ಕೆ.ವಿ.ಜಿ ಸಮೂಹ ವಿದ್ಯಾ ಸಂಸ್ಥೆಗಳು ಕಮಿಟಿ ಬಿ ಇದರ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಡಾ.ಉಜ್ವಲ್ ಯು.ಜೆ ಭಾಗವಹಿಸಿ ಶುಭ ಹಾರೈಸಿದರು.ಕೆ.ವಿ.ಜಿ ಕೈಗಾರಿಕಾ ತರಬೇತಿ ಸಂಸ್ಥೆಯ
ಸಿಬ್ಬಂದಿಗಳು ಕೊಡ ಮಾಡಿದ ಡಿಜಿಟಲ್ ಬೋರ್ಡ್ (ಸ್ಮಾರ್ಟ್ಬೋರ್ಡ್) ಮತ್ತು ನೂತನ ಜೆರಾಕ್ಸ್ ಮಿಷನ್ನನ್ನು ಉದ್ಘಾಟಿಸಿ ಸಭಾ ಕಾರ್ಯಕ್ರಮವನ್ನು ಡಾ| ರೇಣುಕಾ ಪ್ರಸಾದ ರವರು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿದರು.ಡಾ. ಕುರುಂಜಿ ವೆಂಕಟ್ರಮಣ ಗೌಡರು ಸ್ಥಾಪಿಸಲ್ಪಟ್ಟ ಈ ವಿದ್ಯಾಸಂಸ್ಥೆ ಕಳೆದ 39 ವರ್ಷಗಳಿಂದ ನಿರಂತರ ಸೇವೆ ಸಲ್ಲಿಸುತ್ತಾ ಬಂದಿದೆ. ಸಾವಿರಾರು ವಿದ್ಯಾರ್ಥಿಗಳು ಇಲ್ಲಿ ವಿದ್ಯಾರ್ಜನೆ ಮಾಡಿ

ಅವರವರ ಬದುಕನ್ನು ಕಟ್ಟಿಕೊಳ್ಳುವಲ್ಲಿ ಸಫಲಾಗಿದ್ದಾರೆ. ಈಗ ಆಧುನಿಕ ಶೈಲಿಯ ಲ್ಯಾಬ್ಗಳನ್ನು, ಉತ್ತಮ ಪೀಠೋಪಕರಣಗಳನ್ನು ಹೊಂದಿರುವ ಕಚೇರಿ, ಕ್ಲಾಸ್ರೂಂಗಳನ್ನು ನೀಡಿ, ರಾಜ್ಯದಲ್ಲೆ ಒಂದು ಮಾದರಿ ಸಂಸ್ಥೆಯಾಗಿ ರೂಪಿಸುವಲ್ಲಿ ಸಾಧ್ಯವಾಗಿದೆ.ವಿದ್ಯಾರ್ಥಿಗಳು ಇದರ ಸದುಪಯೋಗಪಡಿಸಿಕೊಳ್ಳ ಬೇಕು ಎಂದು ಡಾ. ರೇಣುಕಾ ಪ್ರಸಾದ್ ಹೇಳಿದರು.
ಡಾ. ಉಜ್ವಲ್ ಯು.ಜೆ ಮಾತನಾಡಿ ವಿದ್ಯಾರ್ಥಿಗಳಿಗೆ ಕಲಿಯುವಿಕೆಯಲ್ಲಿ ಹಿಂದೆ, ಭೌತಿಕ ಗುರುಗಳಿಂದ ಆರಂಭವಾದರೂ ಇವತ್ತು ಸ್ಮಾರ್ಟ್ ಗುರುಗಳ ಅನಿವಾರ್ಯತೆ ಇದೆ. ಇವುಗಳನ್ನು ನಾವು ಮೂರು ಹಂತಗಳಲ್ಲಿ ಗುರುತಿಸುವುದಾದರೆ ಫಿಸಿಕಲ್ ಗುರು, ಗೂಗಲ್ ಗುರು ಮತ್ತು ವೆಬ್ ಗುರು ಎಂಬುದಾಗಿ ವಿಂಗಡಿಸಬಹುದಾಗಿದೆ. ಆದುದರಿಂದ ಅಧ್ಯಾಪಕರು ಕೂಡ ಮೇಲ್ದರ್ಜೆಗೆ ಏರಿ ವಿದ್ಯಾರ್ಥಿಗಳಿಗೆ ಸ್ಮಾರ್ಟ್ ಕ್ಲಾಸ್ಗಳ ಮೂಲಕ ಶಿಕ್ಷಣವನ್ನು ನೀಡಬೇಕಾಗಿದೆ ಎಂದರು.

ಪ್ರತಿಷ್ಟಿತ ರಾಜ್ಯ ಒಕ್ಕಲಿಗರ ಸಂಘದಲ್ಲಿ ಎರಡನೇ ಬಾರಿಗೆ ಉಪಾಧ್ಯಕ್ಷರಾಗಿ ಆಯ್ಕೆಯಾದ ಡಾ.ರೇಣುಕಾಪ್ರಸಾದ್ ಕೆ.ವಿ, ರಾಜರಾಜೇಶ್ವರಿ ಟೆಕ್ನಾಲಜಿ ಬೆಂಗಳೂರು ಇದರ ಗವರ್ನಿಂಗ್ ಕೌನ್ಸಿಲ್ ಸದಸ್ಯರಾಗಿ, ವಿ.ಟಿ.ಯು ಬೆಳಗಾವಿಯಿಂದ ನೇಮಕಗೊಂಡ ಡಾ. ಉಜ್ವಲ್ ಅವರನ್ನು ಐಟಿಐ ಸಿಬ್ಬಂದಿಗಳ ವತಿಯಿಂದ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಸಂಸ್ಥೆಯ ಪ್ರಾಚಾರ್ಯರಾದ ಚಿದಾನಂದ ಗೌಡ ಬಾಳಿಲ, ಉಪ ಪ್ರಾಂಶುಪಾಲರಾದ ದಿನೇಶ ಮಡ್ತಿಲ, ಕೆ.ವಿ.ಜಿ ಐಟಿಐ ಭಾಗಮಂಡಲದ ಪ್ರಾಂಶುಪಾಲರಾದ ಶ್ರೀಕಾಂತ್, ಗವರ್ನಿಂಗ್ ಕೌನ್ಸಿಲ್ ಸದಸ್ಯರಾದ ಪ್ರಸನ್ನ ರವರು ಉಪಸ್ಥತರಿದ್ದರು. ಸಭೆಯಲ್ಲಿ ಎ.ಜೆ ಪಿಯುಸಿ ಪ್ರ್ರಾಂಶುಪಾಲೆ ಡಾ.ಯಶೋದ ರಾಮಚಂದ್ರ, ಉಪಪ್ರಾಂಶುಪಾಲ ದೀಪಕ್, ಕೆವಿಜಿ ಇಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲರಾದ ಸುರೇಶ್, ಎ.ಒ. ನಾಗೇಶ್ ಕೊಚ್ಚಿ, ಕೆವಿಜಿ ಡೆಂಟಲ್ ಕಾಲೇಜಿನ ಉಪಪ್ರಾಂಶುಪಾಲೆ ಡಾ.ಶೈಲ, ಆಡಳಿತಾಧಿಕಾರಿ ಮಾಧವ ಬಿ.ಟಿ, ಕೆವಿಜಿ ಪಾಲಿಟೆಕ್ನಿಕ್ ಕಾಲೇಜಿನ ಪ್ರಂಶುಪಾಲರಾದ ಅಣ್ಣಯ್ಯ, ಉಪಪ್ರಂಶುಪಾಲರಾದ ಹರೀಶ, ಮತ್ತು ವಸಂತ ಕಿರಿಭಾಗ, ಆನಂದ, ಸೀತಾರಾಮ, ಶಿವರಾಮ ಕೇರ್ಪಳ, ದನಂಜಯ ಕಲ್ಲುಗದ್ದೆ, ಸಂತೋಷ್, ಕಮಲಾಕ್ಷ ಮೊದಲಾದವರು ಉಪಸ್ಥಿತರಿದ್ದರು. ವಿದ್ಯಾರ್ಥಿನಿಯರಾದ ನಿಶಾ ಬಿಎಲ್ ಮತ್ತು ರಕ್ಷಿತಾ ಹೆಚ್.ಎಂ ಪ್ರಾರ್ಥನೆಗೈದರು. ಸಂಸ್ಥೆಯ ಪ್ರಾಚಾರ್ಯರಾದ ಚಿದಾನಂದ ಗೌಡ ಬಾಳಿಲ ಸ್ವಾಗತಿಸಿ, ಪ್ರಸ್ತಾವಿಕವಾಗಿ ಮಾತನಾಡಿದರು. ಉಪಪ್ರಾಂಶುಪಾಲ ದಿನೇಶ ಮಡ್ತಿಲರವರು ವಂದಿಸಿದರು. ಭವಾನಿಶಂಕರ ಅಡ್ತಲೆ ಕಾರ್ಯಕ್ರಮ ನಿರ್ವಹಿಸಿದರು.