ಸುಳ್ಯ:ಸಿ.ಬಿ.ಎಸ್.ಇ 10ನೇ ತರಗತಿ ಫಲಿತಾಂಶ ಪ್ರಕಟಗೊಂಡಿದ್ದು, ಸುಳ್ಯದ ಕೆವಿಜಿ ಐಪಿಎಸ್ ಶೇ. 100 ಫಲಿತಾಂಶ ದಾಖಲಿಸಿದೆ.
ಪರೀಕ್ಷೆಗೆ ಹಾಜರಾದ 38 ವಿದ್ಯಾರ್ಥಿಗಳಲ್ಲಿ 38 ಮಂದಿಯೂ ಉತ್ತೀರ್ಣರಾಗಿದ್ದಾರೆ. 24 ಮಂದಿ ಡಿಸ್ಟಿಂಕ್ಷನ್, 12 ಮಂದಿ ಪ್ರಥಮ ಶ್ರೇಣಿಯಲ್ಲಿ, ಹಾಗೂ

2 ಮಂದಿ ದ್ವಿತೀಯ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.
ಶಶಾಂಕ್ ಕೆ ಶೇ.97.5, ಧನ್ವಿ ಪಿ.ಜಿ ಶೇ.94.5, ಸಾನ್ವಿ ಶೇ.95.5, ಸಮೃದ್ಧಿ ಶೇ.93.2 ಅಂಕ ಪಡೆದಿದ್ದಾರೆ.
ವಿದ್ಯಾರ್ಥಿಗಳಿಗೆ ಶಾಲಾ ಸಂಚಾಲಕರಾದ ಡಾ. ರೇಣುಕಾಪ್ರಸಾದ್ ಕೆ.ವಿ, ಕಾರ್ಯದರ್ಶಿ ಡಾ. ಜ್ಯೋತಿ ಆರ್.ಪ್ರಸಾದ್, ಸಿಇಒ ಡಾ. ಉಜ್ವಲ್ ಯು.ಜೆ, ಪ್ರಾಂಶುಪಾಲರಾದ ಅರುಣ್ ಕುಮಾರ್ ಅಭಿನಂದನೆ ಸಲ್ಲಿಸಿದ್ದಾರೆ.













