ಭಟ್ಕಳ: ಕಪ್ಪೆ ಚಿಪ್ಪು ತೆಗೆಯಲು ಹೋದ 8 ಮಂದಿ ನೀರಿನಲ್ಲಿ ಮುಳುಗಿ ಮೃತಪಟ್ಟ ದಾರುಣ ಘಟನೆ ಭಟ್ಕಳ ತಾಲ್ಲೂಕಿನ ಶಿರಾಲಿಯ ಅಳ್ವೆಕೋಡಿಯಲ್ಲಿ ನಡೆದಿದೆ.ಇಲ್ಲಿನ ತಟ್ಟೆಹಕ್ಕಲು ಕಡಲ ತೀರದಲ್ಲಿ ನದಿಯಲ್ಲಿ ಭಾನುವಾರ ‘ಕಪ್ಪೆ ಚಿಪ್ಪು ಆರಿಸಲು ನೀರಿಗೆ ಇಳಿದಿದಾಗ
ದುರಂತ ಸಂಭವಿಸಿದೆ. ತಡರಾತ್ರಿ ಸುರಿದ ಮಳೆಗೆ ನದಿಯಲ್ಲಿ ನೀರಿನ ಹರಿವು ಹೆಚ್ಚಿತ್ತು. ಜೊತೆಗೆ ಸಮುದ್ರದ ಅಲೆಗಳ ಅಬ್ಬರದಿಂದ ನೀರಿನ ಮಟ್ಟ ಏರಿಕೆಯಾಗಿ ಮುಳುಗಿರುವ ಶಂಕೆ ಇದೆ ಎಂದು ವರದಿಯಾಗಿದೆ. ಎಂಟು ಮಂದಿಯ ಮೃತದೇಹ ಪತ್ತೆಯಾಗಿದೆ. ಮೃತರೆಲ್ಲರೂ ಒಂದೇ ಕುಟುಂಬದವರು. ಮೃತರ ಪೈಕಿ 7 ಮಂದಿ ಮಹಿಳೆಯರು ಮತ್ತು ಒಬ್ಬರು ಪುರುಷ ಸೇರಿದ್ದಾರೆ.13 ಜನರಿದ್ದ ತಂಡ ಚಿಪ್ಪು ಹೆಕ್ಕಲು ತೆರಳಿತ್ತು. ಮೃತರ ಕುಟುಂಬಕ್ಕೆ ಸರಕಾರ ತಲಾ 5 ಲಕ್ಷ ಪರಿಹಾರ ಘೋಷಿಸಿದೆ.














