ಸೋಣಂಗೇರಿ:ಜೀರ್ಣೋದ್ಧಾರಗೊಳ್ಳುತ್ತಿರುವ ಸೋಣಂಗೇರಿಯ ಶ್ರೀಕೃಷ್ಣ ಭಜನಾ ಮಂದಿರಕ್ಕೆ ಉದ್ಯಮಿ ಕಿರಣ್ ಚಂದ್ರ ಪುಷ್ಪಗಿರಿ ಮೇ 23ರಂದು ಭೇಟಿ ನೀಡಿ ಅಭಿವೃದ್ಧಿ ಕಾಮಗಾರಿಗಳ ವೀಕ್ಷಣೆ ನಡೆಸಿದರು.ಮಂದಿರದಲ್ಲಿ ನಡೆಯುತ್ತಿರುವ ವಿವಿಧ
ಕಾಮಗಾರಿಗಳ ಪ್ರಗತಿ ಕುರಿತು ಅವರು ಮಾಹಿತಿ ಪಡೆದರು.
ಈ ಸಂದರ್ಭದಲ್ಲಿ ಭಜನಾ ಮಂದಿರದ ಸಂಚಾಲಕ ಸತ್ಯಶಾಂತಿ ತ್ಯಾಗಮೂರ್ತಿ, ಕಾರ್ಯದರ್ಶಿ ನಿರಂಜನ, ಕೋಶಾಧಿಕಾರಿ ಲೀಲಾವತಿ, ಉಪಾಧ್ಯಕ್ಷೆ ಹರಿಣಾಕ್ಷಿ ಹಾಗೂ ಪ್ರಮುಖರಾದ ಸುಪ್ರೀತ್ ಮೋಂಟಡ್ಕ, ರುಕ್ಕಯ್ಯ ಗೌಡ ಸುತ್ತುಕೋಟೆ, ಸುಂದರ ರೈ, ಲೋಕೇಶ್, ಶುಭ ಕಾಡುತೋಟ, ವೀಣಾ ಕುಕ್ಕುಂದೂರು, ಪ್ರಿಯಾಂಕ ಚಂದ್ರಶೇಖರ, ಮೋಹಿನಿ ನಡುಮನೆ ಮೊದಲಾದವರು ಉಪಸ್ಥಿತರಿದ್ದರು.














