ಕೋಲ್ಕತ್ತಾ:ಪಶ್ಚಿಮ ಬಂಗಾಳದ ಫಾಲ್ಟಾ ವಿಧಾನಸಭಾ ಕ್ಷೇತ್ರದ ಮರುಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ದೇಬಾಂಶು ಪಾಂಡಾ ಭರ್ಜರಿ ಗೆಲುವು ದಾಖಲಿಸಿದೆ. ಬಿಜೆಪಿ ಅಭ್ಯರ್ಥಿ ದೇಬಾಂಶು ಪಾಂಡಾ 1,49,666 ಮತಗಳನ್ನು ಪಡೆದು 1,09,021 ಮತಗಳ ಅಂತರದಲ್ಲಿ
ಗೆದ್ದು ಬೀಗಿದರೆ, ಸಿಪಿಐ(ಎಂ) ಅಭ್ಯರ್ಥಿ ಶಂಭು ನಾಥ್ ಕುರ್ಮಿ 40,645 ಮತಗಳೊಂದಿಗೆ ಎರಡನೇ ಸ್ಥಾನಕ್ಕೆ ತೃಪ್ತಿಪಟ್ಟರು. ಕಾಂಗ್ರೆಸ್ನ ಅಬ್ದುರ್ ರಜಾಕ್ ಮೊಲ್ಲಾ (10,084 ಮತಗಳು) ಮೂರನೇ ಸ್ಥಾನ ಪಡೆದಿದ್ದಾರೆ. ಚುನಾವಣಾ ಕಣದಿಂದ ಹಿಂದೆ ಸರಿದಿದ್ದ ಟಿಎಂಸಿ ಅಭ್ಯರ್ಥಿ ಜಹಾಂಗೀರ್ ಖಾನ್ 4ನೇ ಸ್ಥಾನ ಪಡೆದರು.ಟಿಎಂಸಿಯ ಜಹಾಂಗೀರ್ ಖಾನ್, ಮತದಾನಕ್ಕೆ ಎರಡು ದಿನಗಳ ಮುನ್ನ ಚುನಾವಣೆಯಿಂದ ಹಿಂದೆ ಸರಿಯುವುದಾಗಿ ಘೋಷಿಸಿದ್ದರು. ಆದಾಗ್ಯೂ ಖಾನ್ 7,783 ಮತಗಳನ್ನು ಪಡೆದು 4ನೇ ಸ್ಥಾನ ಪಡೆದರು.
ಈಗಾಗಲೇ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ 207 ಸೀಟುಗಳನ್ನು ಗೆದ್ದು ಬಿಜೆಪಿ ಅಧಿಕಾರದ ಚುಕ್ಕಾಣಿ ಹಿಡಿದುಕೊಂಡಿದ್ದು,ಇದೀಗ ಫಾಲ್ಟಾ ಕ್ಷೇತ್ರವನ್ನು ಗೆಲುವ ಮೂಲಕ ವಿಧಾನಸಭೆಯಲ್ಲಿ ತನ್ನ ಸಂಖ್ಯಾಬಲವನ್ನು 208ಕ್ಕೆ ಹೆಚ್ಚಿಸಿಕೊಂಡಿದೆ.














