ಬೆಳ್ಳಾರೆ: ಸಿ.ಬಿ.ಎಸ್.ಇ 10ನೇ ತರಗತಿ ಫಲಿತಾಂಶ ಪ್ರಕಟಗೊಂಡಿದ್ದು, ಬೆಳ್ಳಾರೆ ಜ್ಞಾನಗಂಗಾ ಸೆಂಟ್ರಲ್ ಸ್ಕೂಲ್ ಶೇ.100 ಫಲಿತಾಂಶ ದಾಖಲಿಸಿದೆ.ಪರೀಕ್ಷೆಗೆ ಹಾಜರಾದ 48 ವಿದ್ಯಾರ್ಥಿಗಳಲ್ಲಿ 48 ಮಂದಿಯೂ ಉತ್ತೀರ್ಣರಾಗಿ ಶೇ.100 ಫಲಿತಾಂಶ ದಾಖಲಿಸಿದೆ. 29 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್ನಲ್ಲಿ , 17 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಹಾಗೂ

ತ್ರಾಯಿ ಭಟ್
ಇಬ್ಬರು ದ್ವಿತೀಯ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ತ್ರಾಯಿ ಭಟ್ ಶೇ.99 ಅಂಕ ಪಡೆದು ಟಾಪರ್ ಆಗಿದ್ದಾರೆ. ತ್ರಾಯಿ ಭಟ್ ದ.ಕ.ಜಿಲ್ಲೆಯಲ್ಲಿಯೇ ಅತೀ ಹೆಚ್ಚು ಅಂಕ ಪಡೆದಿದ್ದಾರೆ. ಜ್ಞಾನ ಗಂಗಾ ಶಾಲಾ ಸಂಚಾಲಕರಾದ ಎಂ.ಪಿ. ಉಮೇಶ್, ಪ್ರಾಂಶುಪಾಲರಾದ ದೇಚಮ್ಮ ಉತ್ತಮ ಫಲಿತಾಂಶ ದಾಖಲಿಸಿದ ವಿದ್ಯಾರ್ಥಿಗಳಿಗೆ ಅಭಿನಂದನೆ ಸಲ್ಲಿಸಿದ್ದಾರೆ.
ತ್ರಾಯಿ ಭಟ್ಗೆ ಸನ್ಮಾನ ನಗದು ಪುರಸ್ಕಾರ:
ಬೆಳ್ಳಾರೆ ಜ್ಞಾನಗಂಗಾ ಸೆಂಟ್ರಲ್ ಸ್ಕೂಲ್ ನ ಸಿ.ಬಿ.ಎಸ್.ಇ 10ನೇ ತರಗತಿ ಫಲಿತಾಂಶದಲ್ಲಿ ಶೇ. 99 ಅಂಕಗಳನ್ನು ಪಡೆದ ವಿದ್ಯಾರ್ಥಿನಿ ತ್ರಾಯಿ ಭಟ್ ಇವರನ್ನು ಶಾಲಾ ಸಂಚಾಲಕರಾದ ಎಂ.ಪಿ. ಉಮೇಶ್ ಸನ್ಮಾನಿಸಿ, ನಗದು ಪುರಸ್ಕಾರವನ್ನು ನೀಡಿ ಗೌರವಿಸಿದರು. ತ್ರಾಯಿ ಭಟ್ ಸೈನ್ಸ್, ಸೋಶಿಯಲ್ ಸ್ಟಡೀಸ್ ಮತ್ತು

ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ವಿಷಯಗಳಲ್ಲಿ ತಲಾ 100 ಅಂಕಗಳನ್ನು ಪಡೆದಿದ್ದಾರೆ. ಇವರಿಗೆ ರೂ. 25000/- ನಗದು ಪುರಸ್ಕಾರವನ್ನು ಸಂಚಾಲಕರಾದ ಎಂ.ಪಿ. ಉಮೇಶ್ ನೀಡಿ ಗೌರವಿಸಿದರು. ತ್ರಾಯಿ ಭಟ್ ಪೋಷಕರಾದ ವಿಷ್ಣುಪ್ರಶಾಂತ್ ಕಾವಿನಮೂಲೆ ಮತ್ತು ಚೈತನ್ಯ ಬಿ ದಂಪತಿ, ಸಂಸ್ಥೆಯ ಪ್ರಾಂಶುಪಾಲರಾದ ದೇಚಮ್ಮ, ಹಿರಿಯ ಶಿಕ್ಷಕಿ ಸುಚಿತ್ರಾ ಕೆ, ಸಿಬ್ಬಂದಿ ಪದ್ಮಾವತಿ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.