ಸುಳ್ಯ: ಸಿಬಿಎಸ್ಇ ಸಿ ಓ ಇ ಬೆಂಗಳೂರು ಹಾಗೂ ಕೆವಿಜಿ ಐಪಿಎಸ್ ಇದರ ಜಂಟಿ ಆಶ್ರಯದಲ್ಲಿ ಶಿಕ್ಷಕರುಗಳಿಗಾಗಿ ಕೇಂದ್ರ ಮಾಧ್ಯಮಿಕ ಶಿಕ್ಷಣ ಮಂಡಳಿ (CBSE) ಶಿಕ್ಷಣದ ಗುಣಮಟ್ಟವನ್ನು ವೃದ್ಧಿಸಲು ಮತ್ತು ವಿದ್ಯಾರ್ಥಿಗಳ ನೈಜ ಕಲಿಕೆ ಹಾಗೂ ಕೌಶಲ್ಯಗಳನ್ನು ಮೌಲ್ಯಮಾಪನ ಮಾಡುವ ಉದ್ದೇಶದಿಂದ
ಸಾಮರ್ಥ್ಯ ಆಧಾರಿತ ಮೌಲ್ಯಮಾಪನ “( competency based assessment ) ಕಾರ್ಯಗಾರ ಕೆವಿಜಿ ಇಂಟರ್ ನ್ಯಾಷನಲ್ ಪಬ್ಲಿಕ್ ಶಾಲೆಯಲ್ಲಿ ಆಯೋಜಿಸಲಾಯಿತು. ಸಂಪನ್ಮೂಲ ವ್ಯಕ್ತಿಗಳಾಗಿ ಸಿಬಿಎಸ್ಇ ಮಾನ್ಯತೆ ಪಡೆದ ತರಬೇತುದಾರರಾದ ಬ್ರಹ್ಮಾವರದ ಜಿ ಎಂ ವಿದ್ಯಾನಿಕೇತನ ಪಬ್ಲಿಕ್ ಸ್ಕೂಲಿನ ಪ್ರಾಂಶುಪಾಲ ಜಾರ್ಜ್ ಕುರಿಯನ್ ಹಾಗೂ ವಿದ್ಯಾದಾಯಿನಿ ಇಂಗ್ಲಿಷ್ ಮೀಡಿಯಂ ಸ್ಕೂಲ್ ಸುರತ್ಕಲ್ಲಿನ ಶಿಕ್ಷಕಿ ಅಶ್ವಿನಿ ಐತಾಳ್ ಇವರುಗಳು ಉಪಸ್ಥಿತರಿದ್ದರು.

ಕಾರ್ಯಗಾರದಲ್ಲಿ ಶಿಕ್ಷಕರಿಗೆ ವಿದ್ಯಾರ್ಥಿಗಳ ದಕ್ಷತಾಧಾರಿತ ಮೌಲ್ಯಮಾಪನದ ಮೂಲಭೂತ ತತ್ವಗಳು, ಕಲಿಕೆಯ ಫಲಿತಾಂಶಗಳನ್ನು ಅಳೆಯುವ ನೂತನ ವಿಧಾನಗಳು ಮತ್ತು ಪರಿಣಾಮಕಾರಿ ಮೌಲ್ಯಮಾಪನ ಕುರಿತು ಮಾರ್ಗದರ್ಶನವನ್ನು ನೀಡಿದರು. ಜೊತೆಗೆ ವಿವಿಧ ಮಾದರಿಯ ಪ್ರಶ್ನೆಗಳನ್ನು ವಿನ್ಯಾಸಗೊಳಿಸುವ ಕುರಿತು ಗುಂಪು ಚಟುವಟಿಕೆಗಳು ಸಂವಾದ ಮತ್ತು ಉದಾಹರಣೆಗಳ ಮೂಲಕ ಹೊಸ ಕಲಿಕೆಯ ವಿಧಾನಗಳನ್ನು ಅಳವಡಿಸಿಕೊಳ್ಳುವ ಪ್ರಾಯೋಗಿಕ ಕಾರ್ಯಕ್ರಮಗಳನ್ನು ನಡೆಸಿದರು. ಈ ಕಾರ್ಯಗಾರದಲ್ಲಿ ಒಟ್ಟು ಆರು ಸಿ ಬಿಎಸ್ಇ ಶಾಲೆಗಳ 57 ಶಿಕ್ಷಕರುಗಳು ಭಾಗವಹಿಸಿದ್ದರು. ಕಾರ್ಯಗಾರವು ಶಿಕ್ಷಕರಲ್ಲಿ ಹೊಸ ಶೈಕ್ಷಣಿಕ ದೃಷ್ಟಿಕೋನವನ್ನು ಮೂಡಿಸಿದೆ ಎಂದು ಭಾಗವಹಿಸಿದ ಶಿಕ್ಷಕರುಗಳು ತಮ್ಮ ಉತ್ತಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು.
ಕಾರ್ಯಕ್ರಮದ ಸಮಾರೋಪದಲ್ಲಿ ಕೆವಿಜಿ ಅಕಾಡೆಮಿ ಎಜುಕೇಶನ್ ಇದರ ಕಮಿಟಿ ಬಿ ವಿಭಾಗದ ನಿರ್ದೇಶಕಿ ಡಾ. ಜ್ಯೋತಿ ಆರ್ ಪ್ರಸಾದ್ ಭಾಗವಹಿಸಿದ್ದರು. ಶಾಲಾ ಪ್ರಾಂಶುಪಾಲ ಅರುಣ್ ಕುಮಾರ್ ಮಾತನಾಡಿದರು. ಶಿಕ್ಷಕಿ ಭವ್ಯ.ಕೆ ಸ್ವಾಗತಿಸಿ ಸೌಮ್ಯ ಕೆ.ಡಿ. ವಂದಿಸಿದರು.















